ಸಂಶಿ ಸೊಸೈಟಿ ನೂತನ ಸಭಾಭವನ ಉದ್ಘಾಟನೆ

Sanshi
Published on

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಸಂಶಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಸಭಾಭವನವನ್ನು ಸಂಘದ ಅಧ್ಯಕ್ಷ ವಿ.ಡಿ. ಅಕ್ಕಿ ಉದ್ಘಾಟಿಸಿದರು.

ಇದೇ ವೇಳೆ ನಡೆದ ವಾರ್ಷಿಕ ಸಭೆಯಲ್ಲಿ ಬೆಳ್ಳಿ ಮಹೋತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು. ಸಂಸ್ಥೆಯು ಕಳೆದ ಸಾಲಿನಲ್ಲಿ 1.06 ಕೋಟಿ ರೂ. ಲಾಭ ಗಳಿಸಿದ್ದು, 34.15 ಕೋಟಿ ರೂ. ಠೇವಣಿ ಹೊಂದಿದೆ. 22 ಕೋಟಿ ರೂ. ಸಾಲ ವಿತರಣೆ ಮಾಡಿದೆ. 41.14 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಸಂಘದ ಸದಸ್ಯರಿಗೆ ಶೇ. 17ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಯಿತು.

ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸ ನಿಧಿಯಿಂದ 10 ಸಾವಿರ ರೂ. ನಗದನ್ನು ಹೇಮಾ ಸುಂಕದಗೆ ಹಾಗೂ 5 ಸಾವಿರ ರೂ. ನಗದನ್ನು ಪ್ರಿಯಾ ಮುಂದಿನಮನಿಗೆ ವಿತರಿಸಲಾಯಿತು. ಅಪಘಾತದಲ್ಲಿ ನಿಧನರಾದ ಸಂಘದ ಸದಸ್ಯರಿಗೆ 15 ಸಾವಿರ ರೂ. ಅಪಘಾತ ಪರಿಹಾರ ನಿಧಿ ನೀಡಲಾಯಿತು.

ಉಪಾಧ್ಯಕ್ಷ ಎ.ಬಿ. ಉಪ್ಪಿನ ಪ್ರಾಸ್ತಾವಿಕ ಮಾತನಾಡಿದರು. ಐ.ಎಂ. ಕೋರಿ ಸ್ವಾಗತಿಸಿದರು. ಸದಸ್ಯರಾದ ಎಸ್.ಸಿ. ಹತ್ತಿ, ಎನ್.ಎಸ್. ಯರೇಶೀಮಿ, ಎಸ್.ಎಸ್. ಕಮ್ಮಾರ, ಎಂ.ಎಚ್. ನಾಯ್ಕರ, ಎಲ್.ವಿ. ಕೋರಿ, ಎಂ.ಆರ್. ಯಲ್ಲರಡ್ಡಿ, ಜಿ.ಬಿ. ಸೊರಟೂರ, ಎಂ.ಎನ್. ಪಡತೇರ, ವಿ.ಡಿ. ಸುಂಕದ, ಇತರರು ಇದ್ದರು. ಪ್ರಧಾನ ವ್ಯವಸ್ಥಾಪಕ ಎಸ್.ಎಫ್. ಹತ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net