ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಗ್ಗ ಇದರ 4.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಘದ ನೂತನ ಸಮೃದ್ಧಿ ಸಹಕಾರಿ ಸೌಧ ಕಟ್ಟಡವನ್ನು ಜನವರಿ 18ರಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ರಾಜೇಂದ್ರ ಕುಮಾರ್ ಲೋಕಾರ್ಪಣೆಗೊಳಿಸುವರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಮಂಗಳೂರು ಸಹಕಾರ ಸಂಘಗಳ ಪ್ರಬಂಧಕ ಎಚ್.ಎನ್.ರಮೇಶ್ ಕುಮಾರ್, ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಕಾವಳಪಡೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನಾರಾಯಣ ಶರ್ಮ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಕೆ. ಪ್ರಮೋದ್ ಕುಮಾರ್ ರೈ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ, ಹಾಲಿ ಉಪಾಧ್ಯಕ್ಷ ಅಮ್ಮು ರೈ, ಮಾಜಿ ನಿರ್ದೇಶಕ ಪೋಂಕ್ರ ಅವರನ್ನು ಸನ್ಮಾನಿಸಲಾಗುವುದು.
ಕಟ್ಟಡದ ವಿಶೇಷತೆ: ನೂತನ ಕಟ್ಟಡ ಮೂರು ಅಂತಸ್ತಿನದ್ದಾಗಿದ್ದು, ಎರಡು ಪ್ರತ್ಯೇಕ 1000 ಮತ್ತು 500 ಆಸನಗಳ ಸುಸಜ್ಜಿತ ಸಭಾಂಗಣ, ಗೋದಾಮು, ವಾಣಿಜ್ಯ ಮಳಿಗೆ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಅಡುಗೆ ಕೋಣೆ ಸೌಲಭ್ಯವಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ, ಉಪಾಧ್ಯಕ್ಷರಾದ ಅಮ್ಮು ರೈ, ನಿರ್ದೇಶಕರುಗಳಾದ ಪಿ. ಜಿನರಾಜ ಆರಿಗ, ಕೆ. ಚಂದಪ್ಪ ಪೂಜಾರಿ, ಬೆನಡಿಕ್ಟ್ ಡಿಸೋಜ, ಬಿ.ಶಿವಪ್ರಸಾದ್, ಸವಿತಾ ಬಿ.ಎಸ್, ಆಶಾ, ಪ್ರಕಾಶ್ ಶೆಟ್ಟಿ, ನವೀನ್ ಶೆಟ್ಟಿ, ಚಂದಪ್ಪ ಮೂಲ್ಯ, ರಾಜು, ಬಾಲಕೃಷ್ಣ ನಾಯ್ಕ, ಗಂಗಾಧರ ಪೂಜಾರಿ, ಕೀರ್ತಿರಾಜ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಾನಂದ ಗಟ್ಟಿ ಶ್ರಮಿಸುತ್ತಿದ್ದಾರೆ.