

ಮುನವಳ್ಳಿ: ಪಟ್ಟಣದ ರುದ್ರಪಶುಪತಿಮಠದಲ್ಲಿ ಲಿಂ. ಗುರುನಿರ್ವಾಣ ರುದ್ರಪಶುಪತಿ ಸ್ವಾಮೀಜಿ ದ್ವಿತೀಯ ಪುಣ್ಯಸ್ಮರಣೆ ಹಾಗೂ ಮಠದ ಮಹಾದ್ವಾರದ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರ ಜರುಗಿತು.
ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಲಿಂ. ರುದ್ರಪಶುಪತಿ ಶ್ರೀಗಳು ಲಿಂಗಪೂಜಾ ನಿಷ್ಠರಾಗಿ ಸಮಾಜಮುಖಿಯಾಗಿ ಹಾಗೂ ಭಕ್ತರ ಉನ್ನತಿಗೆ ಸದಾ ಶ್ರಮಿಸಿದ್ದರು. ಅಂಥ ಪೂಜ್ಯರ ಆದರ್ಶದ ಹಾದಿಯಲ್ಲಿ ನಾವೆಲ್ಲ ಸಾಗೋಣ ಎಂದು ಆಶಿಸಿದರು.
ವೇದಮೂರ್ತಿಗಳಾದ ಗಂಗಯ್ಯ ಅಷ್ಟಗಿಮಠ, ಮಡಿವಾಳಸ್ವಾಮಿ ಹಿರೇಮಠ, ಎಂ.ಕೆ. ಹಿರೇಮಠ, ವೀರಯ್ಯಶಾಸಿ ಹೊರಕೇರಿಮಠ, ಅಣ್ಣಯ್ಯ ಘಟವಾಳಿಮಠ, ರಾಜುಶಾಸಿ, ರಮೇಶ ಗೋಮಾಡಿ, ಶಂಕರ ಗಯ್ಯಳಿ, ಎಂ.ಆರ್. ಗೋಮಾಡಿ, ಈಶ್ವರ ಕರೀಕಟ್ಟಿ, ಮಹಾಂತೇಶ ಗೋಮಾಡಿ, ಅಶೋಕ ಗೋಮಾಡಿ, ಮುರಿಗೆಪ್ಪ ಕುಂಬಾರಿ, ನಿಶಾಂತ ಕೋರಿ, ಅಜ್ಜಪ್ಪ ಬುರ್ಜಿ, ಡಾ. ಎಂ.ಬಿ. ಅಷ್ಟಗಿಮಠ, ವಿರೂಪಾಕ್ಷ ಬುರ್ಜಿ, ಪಂಚಲಿಂಗಪ್ಪ ವಾಳಿ, ಗುರುಶಿದ್ದಪ್ಪ ಶೆಟ್ಟರ, ಶಂಕರ ಕೋರಿ, ರಾಜಶೇಖರ ಶೀಲವಂತ ಇತರರಿದ್ದರು.