ಸುದೇವ್ ಶಿಕ್ಷಣ ಸಂಸ್ಥೆಯ ರಾಯಲ್ ಪದವಿ ಕಾಲೇಜ್ ಉದ್ಘಾಟನೆ

royal
Published on

ಬೆಂಗಳೂರು: ನಗರದ ಪ್ರತಿಷ್ಠಿತ ಸುದೇವ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನೂತನ ರಾಯಲ್ ಪದವಿ ಕಾಲೇಜಿಗೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಶೋಭಾ ಕಲಶಕ್ಕೆ ಹಾಲೆರೆಯುವುದರ ಮೂಲಕ ನೂತನ ಕಾಲೇಜನ್ನು ವಿನೂತನವಾಗಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಡಾ.ಶೋಭಾ, ಪ್ರಸ್ತುತ ಪ್ರಪಂಚದಲ್ಲಿ ಪಠ್ಯ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಅದರ ಜೊತೆ ಅಧ್ಯಾಪಕರು ಕಾಲಕ್ಕೆ ತಕ್ಕ ಹಾಗೆ ಬೋದನಾ ವಿಧಾನವನ್ನು ನವೀಕರಿಸಿಕೊಳ್ಳಬೇಕು. ಕಾಲೇಜುಗಳು ನಡೆಸುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಪಾಲ್ಗೊಳ್ಳಬೇಕು. ಆಗ ಮಕ್ಕಳ ಶೈಕ್ಷಣಿಕ ಮಾಹಿತಿಯು ಕೂಡಾ ದೊರೆಯುತ್ತದೆ ಎಂದರು.

ಸಮಾರಂಭದಲ್ಲಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ದೇವರಾಜ್ ಬಿ.ಕೆ, ವ್ಯವಸ್ಥಾಪಕ ನಿರ್ದೇಶಕರಾದ ಸುಜಾತ ದೇವರಾಜ್, ಪ್ರಾಚಾರ್ಯರಾದ ಡಾ. ಲಕ್ಷ್ಮೀಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net