ನಾಳೆ ರೋಟರಿ ಅಧ್ಯಕ್ಷರ ಪದಗ್ರಹಣ

13sor3
ಸೊರಬ ರೋಟರಿ ಪೂರ್ವಭಾವಿ ಸಭೆಯಲ್ಲಿ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿದರು. ಮಂಜು ತವನಂದಿ, ಡಾ. ನಾಗರಾಜ್, ನಾಗರಾಜ್ ಗುತ್ತಿ, ರಾಜು ಹಿರಿಯಾವಲಿ, ಓಟೂರು ಕೃಷ್ಣಪ್ಪ ಇತರರಿದ್ದರು.
Published on

ಸೊರಬ: ರೋಟರಿ ಕ್ಲಬ್‌ನ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.15ರಂದು ಪಟ್ಟಣದ ರೇಣುಕಾಂಬಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಧ್ಯಕ್ಷ ಮಂಜು ತವನಂದಿ ಹೇಳಿದರು. ಗುರುವಾರ ಪೂರ್ವ ಸಭೆಯಲ್ಲಿ ಮಾತನಾಡಿ, ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ನಾಗರಾಜ್ ಅವರಿಗೆ ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಪದವಿ ಪ್ರದಾನ ಮಾಡಲಿದ್ದಾರೆ. ಸಾಹಿತಿ ಎಸ್.ಟಿ.ಶಾಂತಗಂಗಾಧರ, ರವಿ ಕೊಟೋಜಿ, ಮಹೇಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸೊರಬ ರೋಟರಿ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್, ನಿಯೋಜಿತ ಅಧ್ಯಕ್ಷ ಡಾ. ನಾಗರಾಜ್, ಮಾಜಿ ಅಧ್ಯಕ್ಷ ನಾಗರಾಜ್ ಗುತ್ತಿ, ರಾಜು ಹಿರಿಯಾವಲಿ, ಕೃಷ್ಣಪ್ಪ ಓಟೂರು, ಕಾರ್ಯದರ್ಶಿ ಯಶೋದರಾ, ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net