

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಮೊಬೈಲ್ ಗೀಳಿನಿಂದ ಹೊರಬರಬೇಕು. ವಿದ್ಯಾರ್ಥಿ ಜೀವನವು ಭವಿಷ್ಯದ ಬುನಾದಿ. ಅಂಕ ಗಳಿಕೆಯ ಜೊತೆಗೆ ಜ್ಞಾನದ ಹಸಿವು ಮುಖ್ಯ. ಶಿಸ್ತುಬದ್ಧ ಓದಿನಿಂದ ಸಾಧನೆ ಸಾಧ್ಯ. ಸಮಯ ಹಾಳು ಮಾಡದೆ ಉನ್ನತ ಗುರಿಯೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಆರ್‌ಎಲ್‌ಎಸ್ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 2024- 25ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಶಹರ ಠಾಣೆ ಇನ್‌ಸ್ಪೆಕ್ಟರ್ ಎನ್.ಕೆ. ಕಾಡದೇವರ ಮಾತನಾಡಿ, ವಿದ್ಯಾರ್ಥಿಗಳು ಗುರಿ ಮುಟ್ಟಲು ತ್ಯಾಗ ಮಾಡಲು ಸಿದ್ಧರಿರಬೇಕು. ಕನಸು ನನಸು ಮಾಡಲು ಶ್ರಮ ಪಡಬೇಕು. ಸೋಮಾರಿತನದಿಂದ ಹೊರಬರಬೇಕು. ಸಮಾಜದಲ್ಲಿ ಬದುಕುವ ನಾವು ನೈತಿಕ ವÀiËಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಜಾಗರೂಕತೆಯಿಂದ ಬಳಸಬೇಕು. ಸಂವಹನ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಆನ್‌ಲೈನ್ ಗೇಮ್‌ಗಳ ಬಗ್ಗೆ ಎಚ್ಚರ ಅಗತ್ಯ. 18 ವರ್ಷ ತುಂಬುವವರೆಗೆ ವಾಹನ ಚಾಲನೆ ಮಾಡಬಾರದು. ಪೋಕ್ಸೋ ಕಾಯ್ದೆ, ಬಾಲಾಪರಾಧ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.
ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸಿನ ಆಕರ್ಷಣೆಗಳಿಗೆ ಒಳಗಾಗಿ ದಾರಿ ತಪ್ಪಬಾರದು. ತಂದೆ- ತಾಯಿ ಕಂಡ ಕನಸು ನನಸು ಮಾಡಿ ಋಣ ತೀರಿಸಬೇಕು ಎಂದರು.
ಪ್ರಾಚಾರ್ಯ ಸಿ.ವಿ. ಕಣಬರಗಿ ಪ್ರಾಸ್ತಾವಿಕವಾಗಿ ಮಾಡನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸÀಲಾಯಿತು. ಸ್ಥಾನಿಕ ಆಡಳಿತ ಮಂಡಳಿಯ ಸದ್ಯಸರಾದ ಅಶೋಕ ಚಿಕ್ಕೊಡಿ, ಶಿವಾನಂದ ಹರಕುಣಿ, ಉಪ ಪ್ರಾಚಾರ್ಯ ಆರ್.ಬಿ. ಬಾನಪ್ಪನವರ ಹಾಗೂ ಬೋಧಕ ಸಿಬ್ಬಂದಿ ಇದ್ದರು.
ವೈ.ಪಿ. ತಳವಾರ ಪರಿಚಯಿಸಿದರು. ದೀಪಾ ಮುಂಡರಗಿ ನಿರೂಪಿಸಿದರು. ಕೆ.ಎಂ. ಮಹಾಂತೇಶಯ್ಯ ವಂದಿಸಿದರು.