ಆಟೋ ಚಾಲಕರಿಗೆ ಮೂಲಸೌಕರ್ಯ: ಶಾಸಕ ಅಶೋಕ್‌ಕುವಾರ್ ರೈ ಭರವಸೆ

New Project (13)
Published on

ಪುತ್ತೂರು ಗ್ರಾಮಾಂತರ: ಬಿಸಿಲಿನಲ್ಲಿ ದುಡಿಯುವ ಆಟೋರಿಕ್ಷಾ ಚಾಲಕರಿಗೆ ನೆರಳಿನ ವ್ಯವಸ್ಥೆಗಾಗಿ ಕ್ಷೇತ್ರದಾದ್ಯಂತ ಅಗತ್ಯ ಇರುವ ಕಡೆಗಳಲ್ಲಿ ತಂಗುದಾಣ ನಿರ್ಮಾಣ ವಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ತಂಗುದಾಣದ ಬಳಿ ಶೌಚಾಲಯವನ್ನು ನಿರ್ಮಾಣ ವಾಡುವ ಚಿಂತನೆ ಇದೆ ಎಂದು ಶಾಸಕ ಅಶೋಕ್ ಕುವಾರ್ ರೈ ಹೇಳಿದರು.

ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಶಾಸಕರ ಅನುದಾನದಿಂದ ನಿರ್ಮಾಣವಾದ ನೂತನ ರಿಕ್ಷಾ ತಂಗುದಾಣವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಮೊಯ್ದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪಸ್ರಸಾದ್ ಪಾಣಾಜೆ, ಕಾಂಗ್ರೆಸ್ ಮುಖಂಡರಾದ ಅಬೂಬಕ್ಕರ್, ಐತಪ್ಪ ಪೇರಲ್ತಡ್ಕ, ನಾರಾಯಣ ಹೊಳ್ಳ, ಸಿದ್ದಿಕ್ ತಂಬುತ್ತಡ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net