ನವೀಕರಣಗೊಂಡ ಸಿಆರ್‌ಸಿ ಕೇಂದ್ರದ ಉದ್ಘಾಟನೆ

dodduru
Published on

ಲಕ್ಷ್ಮೇಶ್ವರ: ಸರ್ಕಾರಗಳು ಶಿಕ್ಷಣಕ್ಕಾಗಿ ಅನೇಕ ಪೂರಕ ಯೋಜನೆ, ಸೌಕರ್ಯಗಳನ್ನು ಕಲ್ಪಿಸುತ್ತಿವೆ. ಅವುಗಳ ಸಮರ್ಪಕ ಅನುಷ್ಠಾನ ಮತ್ತು ನೀಡಿದ ಸೌಕರ್ಯಗಳ ಸದ್ವಿನಿಯೋಗ, ಸಂರಕ್ಷಣೆಯ ಮನೋಭಾವ ಶಿಕ್ಷಕರದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ದೊಡ್ಡೂರಿನಲ್ಲಿನ ಸಿಆರ್‌ಸಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮ, ತರಬೇತಿ, ಸಮಾಲೋಚನೆ, ಕಾರ್ಯಾಗಾರ ಸೇರಿ ಶಿಕ್ಷಣದ ಪ್ರಗತಿಗೆ ಪೂರಕವಾದ ಕಾರ್ಯ ಚಟುವಟೆಕಗಳನ್ನು ಕೈಗೊಳ್ಳಲು ಸಿಆರ್‌ಸಿ ಕಟ್ಟಡಗಳು ಅಗತ್ಯ. ಈ ಉದ್ದೇಶದಿಂದ ಸ್ಥಾಪಿಸಲಾದ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡಗಳು ಹಾಳಾಗುತ್ತಿರುವುದನ್ನು ಮನಗಂಡ ಶಿಕ್ಷಕರು ತಮ್ಮ ಸ್ವಂತ ಖರ್ಚಿನಿಂದ ದುರಸ್ತಿಗೊಳಿಸಿರುವುದು ಶ್ಲಾಘನೀಯ. ಇದು ಶಿಕ್ಷಕರಿಗೆ ತಮ್ಮ ಇಲಾಖೆಯ ಮೇಲಿರುವ ಆತ್ಮಾಭಿಮಾನ, ಕಾಳಜಿ ಮತ್ತು ಶಿಕ್ಷಣದ ಮೇಲಿರುವ ಪ್ರೀತಿಗೆ ಕಾರಣವಾಗಿದೆ. ಶಿಕ್ಷಕರ ಈ ಕಾರ್ಯ ಮಾದರಿಯಾಗಿದೆ ಮತ್ತು ನನ್ನ ಕ್ಷೇತ್ರದ ಶಿಕ್ಷಕ ಕಾರ್ಯ ನನಗೆ ಹೆಮ್ಮೆ ತಂದಿದೆ ಎಂದರು.

ಬಿಇಒ ಜಿ.ಎಂ ಮುಂದಿನಮನಿ ಮಾತನಾಡಿ, ಶಾಲೆಯನ್ನೇ ದೇವಾಲಯವೆಂದು, ಮಕ್ಕಳನ್ನೇ ದೇವರೆಂದು ಪೂಜ್ಯನೀಯ ಭಾವನೆಯಿಂದ ಶಿಕ್ಷಣ ಸೇವೆ ಮಾಡುವ ಶಿಕ್ಷಕರು ಕ್ಷೇತ್ರವ್ಯಾಪ್ತಿಯಲ್ಲಿ ಶಿಥಿಲಗೊಳ್ಳುತ್ತಿರುವ ಸಿಆರ್‌ಸಿ ಕಟ್ಟಡಗಳನ್ನು ಕಾಳಜಿಯಿಂದ ಅಭಿವೃದ್ಧಿಗೊಳಿಸುವ ಮೂಲಕ ಇಲಾಖೆಯ ಅಳಿಲು ಸೇವೆ ಮಾಡಿರುವುದು ಖುಷಿ ತಂದಿದೆ ಎಂದರು.

ಬಳಿಕ ನಡೆದ ದೊಡ್ಡೂರ ಕ್ಲಸ್ಟರ್‌ನ ಮುಖ್ಯಶಿಕ್ಷಕರ ಕಾರ್ಯಾಗಾರದಲ್ಲಿ ಸಿಆರ್‌ಪಿ ಜಿ.ಎಚ್ ರಾಜೂರ ಮತ್ತು ಬಿಆರ್‌ಪಿ ಬಸವರಾಜ ಎಂ ಯರಗುಪ್ಪಿ ಅವರು ಶಿಕ್ಷಣ ಇಲಾಖೆಯಲ್ಲಿನ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಮತ್ತು ಮುಖ್ಯ ಗುರುಗಳು ತಮ್ಮ ಶಾಲೆಯಲ್ಲಿ ನಿರ್ವಹಿಸುವ ಜವಾಬ್ದಾರಿಗಳ ಕುರಿತು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ ಹವಳದ, ಎಸ್‌ಡಿಎಂಸಿ ಅಧ್ಯಕ್ಷ ಹಾಲನಗೌಡ ಪಾಟೀಲ, ಉಮೇಶ ಡೊಳ್ಳಿನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್ ಹರ್ಲಾಪೂರ, ಚಂದ್ರಕಾಂತ ನೇಕಾರ, ಎಲ್.ಎನ್ ನಂದೆಣ್ಣವರ, ಗೀತಾ ಹಳ್ಯಾಳ. ಮುಖ್ಯ ಶಿಕ್ಷಕಿ ಎನ್.ವಿ ಕುಲಕರ್ಣಿ, ಎಂ.ಎಸ್ ಹಿರೇಮಠ, ಎಂ.ಎನ್ ಭರಮಗೌಡರ ಮತ್ತು ಸಿಆರ್‌ಪಿ ಜಿ.ಎಚ್ ರಾಜೂರ, ಆರ್ ಮಹಾಂತೇಶ, ಸತೀಶ ಬೋಮಲೆ, ಎಲ್.ಎಫ್ ಮಠದ, ತಿರಕಪ್ಪ ಪೂಜಾರ, ಎಸ್.ಎನ್ ಪಶುಪತಿಹಾಳ, ಎನ್.ಎ ಮುಲ್ಲಾ, ಗ್ರಾಮದ ಎನ್.ಎಚ್ ಹಡಪದ, ಶಂಕ್ರಪ್ಪ ಲಮಾಣಿ, ಗಣೇಶ ಲಮಾಣಿ, ಪುಟ್ಟಪ್ಪ ಲಮಾಣಿ ಮತ್ತು ಮಕ್ಕಳಿದ್ದರು. ಜಿ.ಆರ್ ಪಾಟೀಲ, ಉಮೇಶ ನೇಕಾರ, ಗಿರೀಶ ನೇಕಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net