

ಬೆಳಗಾವಿ: ದಕ್ಷಿಣ ಭಾರತದಲ್ಲಿ ಷರ್ಟ್, ಪಂಚೆ, ಬನಿಯನ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಮ್‌ರಾಜ್ ಕಾಟನ್ ಕಂಪನಿಯ ನೂತನ ಮಳಿಗೆಯು ನಗರದ ಖಡೇಬಜಾರ್ ಬಸ್ ನಿಲ್ದಾಣ ರಸ್ತೆಯಲ್ಲಿ ಗುರುವಾರ ಉದ್ಘಾಟಿಸಲಾಯಿತು. ಕರ್ನಾಟಕದಲ್ಲಿ 54ನೇ ಹಾಗೂ ದೇಶದ 252ನೇ ಮಳಿಗೆ ಇದಾಗಿದ್ದು, ವೇಗಾ ಹೆಲ್ಮೇಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಿಲೀಪ ಚಂದಕ ಮಳಿಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಮ್‌ರಾಜ್ ಕಾಟನ್ ಬಟ್ಟೆ ಅಂಗಿಯು ಜನಪ್ರಿಯವಾಗಿದೆ. ಬೆಳಗಾವಿಯಲ್ಲಿ ಶಾಖೆ ತೆರೆದಿರುವುದು ಖುಷಿಯಾಗಿದೆ. ನಾವೆಲ್ಲ ಬೇರೆ ಕಡೆಗಳಿಗೆ ಹೋಗಿ ಬಟ್ಟೆ ಖರೀರಿಸುತ್ತಿದ್ದೆವು. ಈಗ ಬೆಳಗಾವಿಯಲ್ಲೇ ಈ ಶೋ ರೂಂ ಆರಂಭವಾಗಿರುವುದರಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ. ಬೆಳಗಾವಿ ಸುತ್ತಲಿನ ಪ್ರದೇಶದಲ್ಲಿ ಶಾಖೆಗಳನ್ನು ತೆರೆಯಬಹುದು ಎಂದರು. ಕುಟುಂಬ ಸಮೇತ, ಸ್ನೇಹಿತರೊಂದಿಗೆ ಖರೀದಿಸುವುದಕ್ಕೆ ಹೆಚ್ಚು ಅನುಕೂಲವಾಗಿದೆ. ರಾಮ್‌ರಾಜ್ ಬಟ್ಟೆ ಮಳಿಗೆ ಆರಂಭವಾಗಿರುವುದು ಎಲ್ಲರಿಗೂ ತಿಳಿಸುತ್ತೇವೆ ಎಂದರು.
ಸಶಾ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವನಗೌಡ ಪಾಟೀಲ ದಂಪತಿ ಇದ್ದರು. ಮಳಿಗೆ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ ಜಿ., ಪ್ರಾದೇಶಿಕ ವ್ಯವಸ್ಥಾಪಕ ಜೀವನಕುಮಾರ, ಏರಿಯಾ ವ್ಯವಸ್ಥಾಪಕರಾದ ದೀಪಕ, ಪ್ರಸನ್ನ, ಮಳಿಗೆ ವ್ಯವಸ್ಥಾಪಕ ರಾಜೇಸಾಬ್ ಹಾಗೂ ಬಿಲ್ಡಿಂಗ್ ಮಾಲೀಕ ನಿತೀಶ್ ಮೆನಸೆ, ಮಳಿಗೆಯ ಸಿಬ್ಬಂದಿ ಉಪಸ್ಥಿತರಿದ್ದರು.