ರಾಜ ಕೇಸರಿ ಮಹಿಳಾ ಘಟಕ ಉದ್ಘಾಟನೆ

bel
Published on

ಬೆಳ್ತಂಗಡಿ: ಬಸವನಬೈಲು ನೆಲ್ಲಿಗುಡ್ಡೆ ರಾಜ ಕೇಸರಿ ಮಹಿಳಾ ಘಟಕವನ್ನು ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ ಉದ್ಘಾಟಿಸಿದರು. ರಾಜ ಕೇಸರಿ ಮಹಿಳಾ ಘಟಕದ ಪದಾಧಿಕಾರಿಗಳಿಗೆ ರಕ್ಷೆ ಕಟ್ಟುವ ಮೂಲಕ ರಾಜ ಕೇಸರಿ ಸಂಘಟನೆಗೆ ಸೇರ್ಪಡೆಗೊಳಿಸಲಾಯಿತು.

ರಾಜಕೇಸರಿ ನೆಲ್ಲಿಗುಡ್ಡೆ ಬಸವನಬೈಲು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅನಿತಾ ಬಸವನಬೈಲು, ಉಪಾಧ್ಯಕ್ಷರಾಗಿ ನಳಿನಾಕ್ಷಿ ಅರ್ಬಿ, ಸಂಚಾಲಕಿಯಾಗಿ ಪೂರ್ಣಿಮಾ ನಡ್ಡೋಡಿ, ಸಹ ಸಂಚಾಲಕರಾಗಿ ನಿಮಿತಾ ನೆಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಭಾಗ್ಯಶ್ರೀ ಉಡು, ಸಂಘಟನೆ ಕಾರ್ಯದರ್ಶಿಯಾಗಿ ಸವಿತಾ ನೆಲ್ಲಿಗುಡ್ಡೆ, ಜತೆ ಕಾರ್ಯದರ್ಶಿ ಶಶಿಕಲಾ, ಕೋಶಾಧಿಕಾರಿ ವರ್ಷಾ, ಸಾಮಾಜಿಕ ಜಾಲತಾಣಕ್ಕೆ ಜಯಸ್ಮಿತ ಗೌತಮ್ ಆಯ್ಕೆಯಾದರು. ಸದಸ್ಯರಾಗಿ ಸೌಮ್ಯಾ ಉಡುಪ, ಲತಾ, ಕುಸುಮಾವತಿ, ಶೋಭಾ ನದ್ದೋಡಿ, ರೂಪ ಸಂತೋಷ್ ನೆಲ್ಲಿಗುಡ್ಡೆ, ಹೇಮಲತಾ ನಡೋಡಿ ಆಯ್ಕೆಯಾದರು.

ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಬಂಟ್ವಾಳ ತಾಲೂಕು ಅಧ್ಯಕ್ಷ ಗೌತಮ್ ಪೂಜಾರಿ, ಬಂಟ್ವಾಳ ನೆಲ್ಲಿಗುಡ್ಡೆ ಘಟಕ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net