ಮುರ್ಡೇಶ್ವರದಲ್ಲಿ ಪಿಆರ್‌ಎಸ್ ಕೌಂಟರ್ ಉದ್ಘಾಟನೆ

prs counter
Published on

ಭಟ್ಕಳ: ಮುರ್ಡೇಶ್ವರ ಪ್ರಯಾಣಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಕೌಂಟರ್(ಪಿಆರ್‌ಎಸ್) ಅನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಿರ್ದೇಶಕ ಅಧಿಕಾರಿ ಸಂತೋಷಕುಮಾರ ಜಹಾ ಅವರು ಮಂಗಳವಾರ ಉದ್ಘಾಟಿಸಿದರು.

ಕಳೆದ ಎರಡು ತಿಂಗಳ ಹಿಂದೆ ಸಂತೋಷಕುಮಾರ ಜಹಾ ಅವರು ಮುರ್ಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ನಾಗರಿಕ ಸೇವಾ ಸಮಿತಿ ಮತ್ತು ಸಾರ್ವಜನಿಕರು ಕೌಂಟರ್ ತೆರೆಯುವಂತೆ ಮನವಿ ಸಲ್ಲಿಸಿದ್ದರು.

ಜನರ ಬೇಡಿಕೆ ಮೇರೆಗೆ ಕೌಂಟರ್ ತೆರೆಯಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದು ಸಂತೋಷಕುಮಾರ ಹೇಳಿದರು.

ಕೊಂಕಣ ರೈಲ್ವೆ ಮುಂಬಯಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎಲ್.ಕೆ. ವರ್ಮಾ, ರಿಜನಲ್ ರೈಲ್ವೆ ಮ್ಯಾನೇಜರ್ ಬಿ.ಬಿ.ನಿಕ್ಕಮ್, ಮಂಗಳೂರು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕ್ರಷ್ಣಮೂರ್ತಿ, ಜಿ.ಡಿ.ಮೀನಾ, ಎಸ್.ಎಸ್. ಕಾಮತ ಮುರ್ಡೇಶ್ವರ ರೈಲ್ವೆ ಪಿಎಸ್‌ಐ ಬಿ. ಜಸ್ಟಿನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net