ಪ್ರೀಮಿಯಂ ದಂತ ಚಿಕಿತ್ಸಾಲಯ ಉದ್ಘಾಟನೆ

udp-1-kmc
Published on

ಉಡುಪಿ: ಸಾರ್ವಜನಿಕರಿಗೆ ಬಹು ಅವಶ್ಯಕ ಸೌಲಭ್ಯವಾದ ಪ್ರೀಮಿಯಂ ಸಾಯಂ ಡೆಂಟಲ್​ ಕ್ಲಿನಿಕ್​ ಪ್ರಾರಂಭದಿಂದ ಗುಣಮಟ್ಟದ ದಂತ ಚಿಕಿತ್ಸೆ ಸುಲಭವಾಗಿದೆ. ನಿಯಮಿತ ಕೆಲಸದ ಸಮಯ ಹೊರತುಪಡಿಸಿ ಆಸ್ಪತ್ರೆಗೆ ಭೇಟಿ ನೀಡುವ ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿದೆ ಎಂದು ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ) ಎಂ.ಡಿ.ವೆಂಕಟೇಶ್​ ಹೇಳಿದರು.

ಗುರುವಾರ ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಣಿಪಾಲ ಪ್ರೀಮಿಯಂ ಸಾಯಂ ಕ್ಲಿನಿಕ್​ ಉದ್ಘಾಟಿಸಿ ಮಾತನಾಡಿದರು.
ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್​ ಕುಮಾರ್​ ರಾವ್​ ಮಾತನಾಡಿ, ಡೆಂಟಲ್​ ಕ್ಲಿನಿಕ್​ಗಳು ಎಲ್ಲಾ ಕೆಲಸದ ದಿನಗಳಲ್ಲಿ ಸಾಯಂಕಾಲ 5 ರಿಂದ ರಾತ್ರಿ 8ರವರೆಗೆ ವಿಸತ ಸೇವೆಯನ್ನು ಒದಗಿಸುತ್ತದೆ. ವೈದ್ಯರು ಸಮುದಾಯದ ದಂತ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತಾರೆ ಎಂದರು.

ಮಣಿಪಾಲ ದಂತ ವಿಜ್ಞಾನ ಮಹಾ ವಿದ್ಯಾಲಯದ ಡೀನ್​ ಡಾ. ಮೋನಿಕಾ ಸಿ. ಸೊಲೊಮನ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಓ ಓ ಡಾ. ಆನಂದ್​ ವೇಣುಗೋಪಾಲ್​, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net