ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರಂಜಿ ಸಹಕಾರಿ

22 HBD 01
Published on

ಚಿಟಗುಪ್ಪ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಗೀತಾ ಮಂಜುನಾಥ ಹೇಳಿದರು.

ತಾಲೂಕಿನ ನಿರ್ಣಾ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ವೇದಿಕೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗ್ರಾಪಂ ಉಪಾಧ್ಯಕ್ಷ ಸಂಜುಕುಮಾರ ಕಿರಣ ಮಾತನಾಡಿ, ಗುರಿ ಇದ್ದರೆ ಯಶಸ್ಸು ನಿಶ್ಚಿತ. ಬದುಕಿನಲ್ಲಿ ನಿಶ್ಚಿತ ಗುರಿ ಇಟ್ಟು ವಿದ್ಯಾಭ್ಯಾಸದ ಜತೆಗೆ ತಮ್ಮಲ್ಲಿರುವ ಪ್ರತಿಭೆ ಹೊರಹಾಕಿ ಸಾಧನೆ ಮಾಡಬೇಕು. ಮಕ್ಕಳಲ್ಲಿ ಅಡಗಿದ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವುದಕ್ಕಾಗಿ ಸರ್ಕಾರ ರೂಪಿಸಿದ ಈ ಯೋಜನೆ ಸದ್ಬಳಕೆ ಆಗುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ತೀರ್ಪುಗಾರರು ತಾರತಮ್ಯ ಮಾಡದೆ ನಿಜವಾದ ಪ್ರತಿಭೆ ಗುರುತಿಸಬೇಕೆಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಜಮಾದಾರ್ ಹಾಗೂ ಉಪನ್ಯಾಸಕ ಸುರೇಶ ಕುದುರೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿತ ಶಿಕ್ಷಣ ಹಾಗೂ ಸಂಸ್ಕಾರ ಬದುಕಿನುದ್ದಕ್ಕೂ ಜತೆಯಾಗಿ ಇರಬೇಕು ಎಂದರು.

ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ವಿಷ್ಣುವರ್ಧನ, ವಲಯ ಸಿಆರ್‌ಪಿ ಪ್ರಭು ಕುಂಬಾರ, ಶಿಕ್ಷಕರಾದ ಸುರೇಖಾ, ವಿಜಯಕಲಾ, ಸರೂಬಾಯಿ. ಮಲ್ಲಿಕಾರ್ಜುನ ಸ್ವಾಮಿ. ವೈಜಿನಾಥನ ನಾಸಿ. ಚಂದ್ರಶೆಟ್ಟಿ, ಪ್ರೇಮಲಾ ರೆಡ್ಡಿ, ರವಿ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net