ಹಿರಿಯಡ್ಕದಲ್ಲಿ ಫಿಸಿಯೋಥೆರಪಿ ಘಟಕ ಉದ್ಘಾಟನೆ

udp-30-hiriyadka
Published on

ಉಡುಪಿ: ಎಂಡೋಸಲ್ಫಾನ್​ ಸೇರಿದಂತೆ ದೈಹಿಕ ಅಂಗವಿಕಲತೆ ಇರುವ ಎಲ್ಲಾ ದಿವ್ಯಾಂಗರು ಫಿಸಿಯೋಥೆರಪಿ ಘಟಕದಲ್ಲಿ ದೊರಕುವ ಸೌಲಭ್ಯ ಪಡೆದುಕೊಳ್ಳುವಂತೆ ಮಣಿಪಾಲ ಮಾಹೆಯ ಎಂ.ಸಿ.ಎಚ್​.ಪಿ ಡಾ. ಅರುಣ್​ ಮಯ್ಯ ತಿಳಿಸಿದರು.

ಹಿರಿಯಡ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಫಿಸಿಯೋಥೆರಪಿ ಘಟಕದ ಉದ್ಘಾಟಿಸಿ, ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್​ ಮಾತನಾಡಿ, ಈ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಫಿಸಿಯೋಥೆರಪಿ ಘಟಕವನ್ನು ಪ್ರಾರಂಭಿಸಲಾಗಿದ್ದು, ಸ್ಥಳಿಯ ದಿವ್ಯಾಂಗರು ಈ ಘಟಕದಲ್ಲಿ ಲಭ್ಯವಿರುವ ಸೇವೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಎಂಡೋಸಲ್ಫಾನ್​ ಕಾರ್ಯಕ್ರಮದ ಜಿಲ್ಲಾ ನೋಡೆಲ್​ ಅಧಿಕಾರಿ ಡಾ. ಪ್ರಶಾಂತ ಜಿ. ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್​ ಸಾಲಿಯಾನ್​, ಒನ್​ ಗುಡ್​ ಸ್ಟೆಪ್​ನ ಮ್ಯಾನೆಜಿಂಗ್​ ಡೈರೆಕ್ಟರ್​ ಅಮಿತಾ ಪೈ, ಡಾ. ರಾಜೇಶ್​ ನಾವಡ ಜಿ.ವಿ. ಮತ್ತಿತರರು ಉಪಸ್ಥಿತರಿದ್ದರು. ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸತ್ಯಶಂಕರ್​ ಸ್ವಾಗತಿಸಿ, ಪ್ರಶಾಂತ್​ ಶೆಟ್ಟಿ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾಬಾಯಿ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net