ಸಹಕಾರಿ ಸಂಘಗಳಿಂದ ಸ್ವಾವಲಂಬಿ ಬದುಕು : ಯದುವೀರ್ ಒಡೆಯರ್ ಬಣ್ಣನೆ :

3-yadhuveer
Published on

ಸುಳ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ಜನರಿಗೆ ಆರ್ಥಿಕ ಸೌಲಭ್ಯ ನೀಡುತ್ತಾ ಜನರು ಸ್ವಾವಲಂಬಿಗಳಾಗಿ ಬದುಕುವಂತಾಗಲು ಸಹಕಾರಿಯಾಗಿವೆ ಎಂದು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಮತ್ತು ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪೆರಾಜೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ನೂತನ ಪ್ರವೇಶ ದ್ವಾರವನ್ನು ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೊಂಡದೇರ ಗಣಪತಿ ಉದ್ಘಾಟಿಸಿದರು. ಇಂಜಿನಿಯರ್ ಶ್ಯಾಮ್‌ಪ್ರಸಾದ್ ಅಡ್ಡಂತಡ್ಕ, ಮಂಗಳೂರು ಕ್ಯಾಂಪ್ಕೋ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಸಂಪಾಜೆ ಪ್ರಾ.ಕೃ.ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ.ಅನಂತ್ ಊರುಬೈಲು ಭಾಗವಹಿಸಿದರು.

ಪೆರಾಜೆ ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಸಹಕಾರಿ ಉಪಾಧ್ಯಕ್ಷ ಅಶೋಕ್ ಪಿ.ಎಂ, ಗ್ರಾ.ಪಂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಮರಗೋಡು ಸಹಕಾರಿ ಸಂಘದ ಅಧ್ಯಕ್ಷ ಅಶ್ವಿನ್ ಸತೀಶ್ ಕಾಂಗೀರ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.

ಸಹಕಾರಿ ಸಂಘದ ನಿರ್ದೇಶಕರಾದ ದೀನರಾಜ್ ದೊಡ್ಡಡ್ಕ, ಹೊನ್ನಪ್ಪ ಅಮೆಚೂರು, ಧನಂಜಯ ಕೋಡಿ, ಸೀತಾರಾಮ ಕದಿಕಡ್ಕ, ಜಯರಾಮ ನಿಡ್ಯಮಲೆ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ್ ಕೆ.ಎಂ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ್ ಬಂಗಾರಕೋಡಿ, ಜಯರಾಮ ಪಿ.ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net