ಗ್ರಾಪಂ ಸೇವೆಗಳಿಗೆ ಪಂಚಮಿತ್ರ ನೆರವು

0403Klb10
ಕಲಬುರಗಿ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಎಂ.ವೈ. ಪಾಟೀಲ್ ಪೋಸ್ಟರ್ ಬಿಡುಗಡೆಗೊಳಿಸಿದರು. ಸಿಇಒ ಭಂವರಸಿಂಗ್ ಮೀನಾ, ಎಂ.ವಿ.ಚಳಿಕೇರಿ, ಶಿವಾನಂದ, ವೀರಣ್ಣ ಕೌಲಗಿ, ಚನ್ನಪ್ಪ, ಶಂಕರ ರಾಠೋಡ್, ಸೈಯದ್ ಪಟೇಲ್ ಇತರರಿದ್ದರು.
Published on

ಕಲಬುರಗಿ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ಸೇವೆ ಪಡೆಯಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿವೃದ್ದಿಪಡಿಸಿರುವ ಪಂಚಮಿತ್ರ ಪೋರ್ಟಲ್ ಅನ್ನು ಅಫಜಲಪೂರ ಶಾಸಕ ಎಂ.ವೈ. ಪಾಟೀಲ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಿದರು.

ಸಾರ್ವಜನಿಕರು ಅಗತ್ಯವಿರುವ ವಿವಿಧ ಮಾಹಿತಿ ಮತ್ತು ವಿವರ ಪಡೆಯಲು ಗ್ರಾಪಂಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸ್ಥಿತಿಗತಿ ಹಾಗೂ ಕುಂದುಕೊರತೆ ದಾಖಲಿಸಲು ಪಂಚಮಿತ್ರ ಪೋರ್ಟಲ್ ಅನುಕೂಲವಾಗಲಿದೆ ಎಂದು ಶಾಸಕ ಪಾಟೀಲ್ ಹೇಳಿದರು.

ಜಿಪಂ ಸಿಇಒ ಭಂವರಸಿಂಗ್ ಮೀನಾ ಮಾತನಾಡಿ, ಗ್ರಾಪಂಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಕುಂದುಕೊರತೆ ದಾಖಲಿಸಿ ನಿವಾರಿಸಲು ಯಾವುದೇ ನಿರ್ದಿಷ್ಟವಾದ ವೆಬ್‌ಸೈಟ್ ಅಥವಾ ಪೋರ್ಟಲ್ ಇರಲಿಲ್ಲ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಪಂಚಮಿತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಚುನಾಯಿತ ಪ್ರತಿನಿಧಿಗಳ, ಸಿಬ್ಬಂದಿ ವಿವರ, ಪೂರ್ಣಗೊಂಡ ಗ್ರಾಪಂ ಸಭೆಗಳ ನಡಾವಳಿ, ಮುಂಬರುವ ಸಭೆಗಳ ಮಾಹಿತಿ, ಸೇವೆ, ಸ್ವಸಹಾಯ ಗುಂಪು, ಆದಾಯ ಸಂಗ್ರಹ ವಿವರ ಮತ್ತು ೪(೧)(ಎ)(೧)(ಬಿ) ಆರ್‌ಟಿಐ ದಾಖಲೆ ಪಡೆಯಬಹುದು ಎಂದರು.

ಉಪಕಾರ್ಯದರ್ಶಿ ಎಂ.ವಿ. ಚಳಿಕೇರಿ, ಇಇ ಶಿವಾನಂದ, ತಾಪಂ ಇಒ ವಿಲಾಸ ರಾಜ್, ವೀರಣ್ಣ ಕೌಲಗಿ, ಚನ್ನಪ್ಪ, ಶಂಕರ ರಾಠೋಡ್, ಸೈಯದ್ ಪಟೇಲ್, ಅಂಬರೀಶ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net