ಕಡಬ: ಕಡಬ ತಾಲೂಕು ಒಕ್ಕಲಿಗ ಸೇವಾ ಸಂಘ ವತಿಯಿಂದ ಹೊಸಮಠದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವವನದಲ್ಲಿ ಸಂಘದ ಆಡಳಿತ ಕಚೇರಿ ಉದ್ಘಾಟನೆ ಹಾಗೂ ಸಮುದಾಯದ ತಾಲೂಕುಮಟ್ಟದ ವಾರ್ಷಿಕ ಕ್ರೀಡಾಕೂಟ ಡಿ.25ರಂದು ಹೊಸಮಠದಲ್ಲಿ ನಡೆಯಲಿದೆ ಎಂದು ಒಕ್ಕಲಿಗ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಹೇಳಿದರು.
ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 42 ಗ್ರಾಮಗಳಿಂದ ಆರು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ನೂತನ ಸಮುದಾಯ ಭವನದಲ್ಲಿ ಸಂಘದ ಕಚೇರಿಯನ್ನು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟಿಸಿ ಆರ್ಶೀವಚನ ನೀಡಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್, ಚಾರ್ವಾಕ ದೈಪಿಲ ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಅರುವಗುತ್ತು, ಬೆಂಗಳೂರಿನ ಉದ್ಯಮಿ ನಟರಾಜ್, ಲೋಕೋಪಯೋಗಿ ಇಲಾಖಾ ಅಭಿಯಂತ ಪ್ರಮೋದ್ ಕೆ.ಕೆ.ಭಾಗವಹಿಸಲಿದ್ದಾರೆ.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕಡಬ ತಾಲೂಕು ಒಕ್ಕಲಿಗ ಗೌಡ ಸಮುದಾಯದ ಸಭಾಭವನ ಹೊಸಮಠ ಸೇತುವೆ ಬಳಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿದೆ. ಶೇ.75ರಷ್ಟು ಕಾಮಗಾರಿ ಮುಗಿದಿದೆ. ಆರ್ಥಿಕ ಕ್ರೋಡೀಕರಣ ದೃಷ್ಟಿಯಿಂದ 42 ಗ್ರಾಮಗಳ ಸಮುದಾಯದ ಸುಮಾರು 10 ಸಾವಿರ ಮನೆಗಳ ಸಂಪರ್ಕ ಈಗಾಗಲೇ ಮಾಡಲಾಗಿದೆ. ಎಲ್ಲರಿಂದ ಉತ್ತಮ ಸ್ಪಂದನೆ ದೊರೆತಿದೆ. ಸಮುದಾಯದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳಿಂದ ಆರ್ಥಿಕ ನೆರವಿನ ಭರವಸೆ ದೊರೆತಿದೆ. ಸರ್ಕಾರದ ಅನುದಾನಕ್ಕೂ ಪ್ರಯತ್ನ ನಡೆಸಲಾಗುತ್ತಿದೆ. ಪ್ರತಿ ಗ್ರಾಮದ ಸಮುದಾಯದಚವರು ಶ್ರಮದಾನ ಮಾಡುತ್ತಿದ್ದಾರೆ ಎಂದು ಸುರೇಶ್ ಗೌಡ ವಿವರಿಸಿದರು.
ಒಕ್ಕಲಿಗ ಸೇವಾ ಸಂಘದ ತಾಲೂಕು ಉಪಾಧ್ಯಕ್ಷ ತಮ್ಮಯ್ಯ ಗೌಡ, ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ಯುವ ಘಟಕದ ಪೂರ್ಣೆಶ್ ಬಾಬ್ಲಬೆಟ್ಟು, ವಿವಿಧ ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರ ಕೋಡಿಬೈಲು, ಗಣೇಶ್ ಕೈಕುರೆ, ಲಾವಣ್ಯ ಮಂಡೆಕರ, ಮೋಹನ್ ಕೋಡಿಂಬಾಳ, ರಂಜಿತ್ ಪದಕಂಡ, ಆಶೋಕ್ ಗೌಡ ಶೇಡಿ, ಸುಬ್ರಹ್ಮಣ್ಯ ಗೌಡ ಎರ್ಮಳ, ತಿಮ್ಮಪ್ಪ ಗೌಡ ಕುಂಡಡ್ಕ ಇದ್ದರು.