

ವಿಜಯವಾಣಿ ಸುದ್ದಿಜಾಲ ಉಡುಪಿ
ಸನಾತನ ಹಿಂದು ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹಗಳು ನಡೆಯಬೇಕಿದ್ದು, ಅದು ಕಾಲದ ತುರ್ತು ಅಗತ್ಯತೆಯಾಗಿದೆ. ಅದಕ್ಕಾಗಿಯೇ ದಂಪತಿ.ಕಾಂ ಎಂಬ ನೋಂದಣಿ ಕಚೇರಿ ತೆರೆಯಲಾಗಿದೆ. ಜಾಗತಿಕ ಮಟ್ಟದಲ್ಲಿ ವಧು-ವರರ ಮೇಳಾಮೇಳಿಗಾಗಿ ತಂತ್ರಜ್ಞಾನವನ್ನೇ ಮಾಧ್ಯಮವನ್ನಾಗಿ ಅಳವಡಿಸಲಾಗಿದ್ದು, ಉಚಿತ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ ನೀಡಿದರು.
ಭಾರತ, ಅಮೆರಿಕ, ಕೆನಡಾ, ಆಸ್ಟ್ರೆಲಿಯಾ, ಇಂಗ್ಲಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಪುತ್ತಿಗೆ ಮಠದ ಶಾಖೆಗಳ ವಿಸ್ತೃತ ಸೇವಾಪ್ರಕಲ್ಪ ಇದಾಗಿದೆ. ನಮ್ಮ ಪರಮ ಗುರುಗಳಾದ ಸುಧೀಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ಪರ್ವ ಕಾಲದಲ್ಲಿ ಕಚೇರಿ ಉದ್ಘಾಟಿಸಲಾಗಿದೆ. ಮಹಾತಪಸ್ವಿ ಹಾಗೂ ಶತಾಯುಷಿಯಾಗಿದ್ದ ಅವರ ಸ್ಮರಣಾರ್ಥ ಈ ಕಾರ್ಯ ಮಾಡಲಾಗುತ್ತಿದೆ ಎಂದರು.