ಮೈಸೂರು ಪ್ಯಾಲೇಸ್ ಸಿಟಿ ಕ್ವೀನ್ಸ್ ಪದಾಧಿಕಾರಿಗಳ ಪದಗ್ರಹಣ

9
Published on

ಮೈಸೂರು: ಅಂತಾರಾಷ್ಟ್ರೀಯ ಲಯನ್ ಸಂಸ್ಥೆಯ ಜಿಲ್ಲೆ 317ಜಿನ ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೇಸ್ ಸಿಟಿಯಿಂದ 25 ಮಹಿಳಾ ಸದಸ್ಯರನ್ನು ಒಳಗೊಂಡಿರುವ ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೇಸ್ ಸಿಟಿ ಕ್ವೀನ್ಸ್ ಎಂಬ ನೂತನ ಶಾಖೆಯ ಪದಗ್ರಹಣ ಸಮಾರಂಭವನ್ನು ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಲಯನ್ಸ್ ಸಂಸ್ಥೆಯ ಮಾಜಿ ಗೌರ್ವನರ್ ಕೆ.ದೇವೇಗೌಡ ಅವರು ನೂತನ ಶಾಖೆಗೆ ಚಾಲನೆ ನೀಡಿದರೆ, ಜಿಲ್ಲಾ ಪಾಲಕ(ಚುನಾಯಿತ) ಎಲ್. ಸುಬ್ರಮಣ್ಯ ನೂತನ ಸದಸ್ಯರಿಗೆ ಪ್ರತಿಜ್ಞಾನಿಧಿ ಬೋಧಿಸಿದರು. ಒಂದನೇ ಉಪ ಜಿಲ್ಲಾ ಪಾಲಕ(ಚುನಾಯಿತ) ಕೆ.ಎಲ್.ರಾಜಶೇಖರ್, 2ನೇ ಉಪ ಜಿಲ್ಲಾ ಪಾಲಕ(ಚುನಾಯಿತ) ಮತ್ತಿದೇವ್ ಕುಮಾರ್, ಪ್ಯಾಲೇಸ್ ಸಿಟಿ ಅಧ್ಯಕ್ಷ ವಾಸು, ಜಿಲ್ಲಾ ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್, ಪ್ರಾಂತೀಯ ಅಧ್ಯಕ್ಷ ಪುಟ್ಟಸ್ವಾಮಿ, ವಲಯ ಅಧ್ಯಕ್ಷ ಸತೀಶ್, ಜಿಲ್ಲಾ ರಾಯಭಾರಿ ಆನಂದ್, ಸದಸ್ಯರಾದ ನಾರಾಯಣಸ್ವಾಮಿ, ಜಯಕುಮಾರ್, ನೂತನ ಕ್ವೀನ್ಸ್ ಲಯನ್ ಸಂಸ್ಥೆ ಅಧ್ಯಕ್ಷೆ ಮಹೇಶ್ವರಿ ರಾಜು, ಕಾರ್ಯದರ್ಶಿ ಆಶಾ ದರ್ಶನ್, ಖಜಾಂಚಿ ಪೂರ್ಣಿಮಾ ನಾಗೇಶ್ ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net