

ಮಂಗಳೂರು: ಕೂಳೂರು ಲಯನ್ಸ್ ಕ್ಲಬ್‌ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾಕರ್ ಶೆಟ್ಟಿ ವಹಿಸಿದ್ದರು, ಪದಗ್ರಹಣ ಅಧಿಕಾರಿಯಾಗಿ ಜಿಲ್ಲೆ 317 ಡಿ ಯ 2ನೇ ಉಪ ಗವರ್ನರ್ ಗೋವರ್ಧನ್ ಕೆ. ಶೆಟ್ಟಿ ಮತ್ತು ಸುಪ್ರೀತ ಜಿ. ಶೆಟ್ಟಿ ಕಾರ್ಯಕ್ರಮ ನಡೆಸಿದರು. ಕಾರ್ಯದರ್ಶಿ ಪ್ರಕಾಶ್ ಕುಮಾರ್, ಖಜಾಂಚಿ ಮೋಹನ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಚರಣ್ ಆಳ್ವ, ಸರ್ವಸದಸ್ಯರು, ವಲಯದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
2025-26ನೇ ಸಾಲಿನ ನೂತನ ಅಧ್ಯಕ್ಷ ವಿ. ಜಿ. ಗುರುಚಂದ್ರ ಹೆಗ್ಡೆ, ಕಾರ್ಯದರ್ಶಿ ಲಕ್ಷ್ಮಣ್ ಕುಂದರ್, ಕೋಶಾಧಿಕಾರಿ ದೊಡ್ಡ ನಂಜಯ್ಯ ಎಚ್.ಎಂ. ನೇಮಕಗೊಂಡರು.