

ಹುಬ್ಬಳ್ಳಿ: ಗೋಕುಲ ರೋಡ್ ರಾಜಧಾನಿ ಕಾಲನಿಯ ಪ್ರೋಬಸ್ ಕ್ಲಬ್‌ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿಯ ಹೆಬಸೂರ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿತ್ತು.
ಎಸ್.ವಿ. ಹೊಂಬಳ (ಅಧ್ಯಕ್ಷ), ಲಕ್ಷ್ಮೀ ಮಂಗಳವೇಡಿ, ಎಂ. ನಲ್ಲಯ್ಯ, ಎಸ್.ಎಸ್. ಕೇಶಪ್ಪನಟ್ಟಿ, ಹೇಮಗಿರಿ ಪಟ್ಟಣಶೆಟ್ಟಿ (ಪದಾಧಿಕಾರಿಗಳು), ಎಂ.ಎ. ಹಿರೇಮಠ, ವಿ.ಎಸ್. ಪಟ್ಟಣಶೆಟ್ಟಿ, ಎಸ್.ಎಸ್. ಮಾಡಕ್ಕ, ವೀರಣ್ಣ ಗೋವೇಶ್ವರ, ಚಂದ್ರಕಾಂತ ಮಿಶ್ರಿಕೋಟಿ, ಐ.ಎಸ್. ಹಂದಿಗೋಳ, ಮೀರಾ ಎಸ್. ರಾವ್ (ನಿರ್ದೇಶಕರು) ಅಧಿಕಾರ ವಹಿಸಿಕೊಂಡರು.
ವಿದ್ಯಾ ವಂಟಮೂರಿ, ಪೂರ್ಣಿಮಾ ಜೋಶಿ, ಪ್ರಭು ಶೆಟ್ಟರ, ಎಂ.ಪಿ. ಕುಂಬಾರ, ವಿ.ಸಿ. ಮಲ್ಲಣ್ಣವರ, ಎಚ್.ಪಿ. ಟಗರಗುಂಟಿ, ಎಂ.ಜಿ. ಹಿರೋಳಿ, ಶಿವಾನಂದ ಮುಂತಾವದರು ಉಪಸ್ಥಿತರಿದ್ದರು. ಆರ್.ಸಿ. ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಗುರು ಸಾಲಿಮಠ, ಪದಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಪ್ರಮಾಣವಚನ ಬೋಧಿಸಿದರು.
ಬಸವರಾಜ ಹೆಬಸೂರ ಅತಿಥಿಗಳಾಗಿದ್ದರು. ಎಂ.ಬಿ. ಬೆಳ್ಳಿಗಟ್ಟಿ ಸ್ವಾಗತಿಸಿದರು. ವಿ.ಬಿ. ಮಾಗನೂರ ನಿರೂಪಿಸಿದರು. ಚನ್ನಬಸಪ್ಪ ಧಾರವಾಡಶೆಟ್ಟರ ವಂದಿಸಿದರು.