ಸಾಲ ಸದ್ವಿವಿನಿಯೋಗವಾದರೆ ಅಭಿವೃದ್ಧಿ : ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

New Project (27)
Published on

ಬೆಳ್ತಂಗಡಿ: ಸಂಸ್ಕಾರ, ಸಹಕಾರ, ಸಂಘಟನೆ ಹಾಗೂ ಸಮೃದ್ಧಿ ಬದುಕಿನ ನಾಲ್ಕು ಸೂತ್ರಗಳು. ಹತ್ತು ಸಂಘ ಸೇರಿದಾಗ ಮಾತ್ರ ಸಹಕಾರ ಸಂಘವಾಗಲು ಸಾಧ್ಯ. ಸಂಘದ ಮೂಲಕ ಮಾಡುವ ಉಳಿತಾಯ ಮತ್ತು ಸಂಘದಿಂದ ಪಡೆದ ಸಾಲವನ್ನು ಸದ್ವಿವಿನಿಯೋಗಿಸಿಕೊಂಡಾಗ ಮಾತ್ರ ನಾವು ಅಭಿವೃದ್ಧಿ ಆಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಸೋಮವಾರ ಒಡಿಯೂರು ಕ್ಷೇತ್ರದಲ್ಲಿ ಪ್ರಧಾನ ಕಚೇರಿ ಹೊಂದಿರುವ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆಯನ್ನು ಮಡಂತ್ಯಾರು ಆಲ್ಫಾ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಉದ್ಘಾಟಿಸಿ ಆಶಿರ್ವಚನ ನೀಡಿದರು. ಬದುಕಿನ ಸೂತ್ರವನ್ನು ಅರಿತು ಜೀವನ ಮಾಡಬೇಕು. ಜನಹಿತ ಕಾರ್ಯಗಳಲ್ಲಿ ಹಣ ಬಳಸಬೇಕು. ಹಣವನ್ನು ಹಿತ, ಮಿತದಲ್ಲಿ ಅಗತ್ಯವಿರುವಾಗ ಉಪಯೋಗಿಸುವುದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು. ಸಹಕಾರಿ ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಮಾತಾನಂದಮಯಿ ಅಧ್ಯಕ್ಷತೆ ವಹಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಸ್ಟಾೃನಿ ಗೋವೆಸ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಪಿಲಾತಬೆಟ್ಟು, ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಯು.ಚಂದ್ರಶೇಖರ ಭಟ್, ಚಂದ್ರಶೇಖರ ಉಪಾಧ್ಯಾಯ, ಶಶಿಧರ್ ಶೆಟ್ಟಿ ಬರೋಡ, ದಂತ ವೈದ್ಯ ಡಾ.ವಿಶುಕುಮಾರ್ ಶೆಟ್ಟಿ ಬಿ, ರತ್ನಾಕರ ಶೆಟ್ಟಿ ಮುಡಯೂರು, ಮಡಂತ್ಯಾರು ಗ್ರಾಪಂ ಅಧ್ಯಕ್ಷೆ ರೂಪಾ ನವೀನ್, ಕಟ್ಟಡ ಮಾಲಕಿ ಲಾವ್ಯ ಮೀನ, ಭಾರತಿ ಜಿ.ಭಟ್, ಗುರುಪ್ರಸಾದ್ ಬಂಗೇರ, ವಿಜಯ ಬಿ.ಎಸ್, ಮಾತೇಶ್ ಭಂಡಾರಿ ಉಪಸ್ಥಿತರಿದ್ದರು. ಸಹಕಾರ ರತ್ನ, ಸಂಘದ ಅಧ್ಯಕ್ಷ ಎ.ಸುರೇಶ್ ರೈ ಸ್ವಾಗತಿಸಿದರು.

ಸಂಘದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡ ಕುಟುಂಬದ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ. ಸಂಘದ ಮೂಲಕ ಹೆಚ್ಚಿನ ಅಭಿವೃದ್ಧಿ ಹೊಂದಬಹುದು. ಸಾಧ್ವಿ ಶ್ರೀ ಮಾತಾನಂದಮಯಿ, ಸಹಕಾರಿ ಗೌರವ ಮಾರ್ಗದರ್ಶಕಿ https://www.vijayavani.net/kala-parba-logo https://www.vijayavani.net/farmers-protest-against-the-tower

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net