

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ಮೊಟ್ಟ ಮೊದಲ ಕೂಸಿನ ಮನೆಯನ್ನು ಮುಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕನಹಳ್ಳಿಯಲ್ಲಿ ನಿರ್ಮಿಸಲಾಗಿದ್ದು, 6 ತಿಂಗಳ ಮಗುವಿನಿಂದ 3 ವರ್ಷದ ಮಕ್ಕಳನ್ನು ಕೇಂದ್ರದಲ್ಲಿ ಮುಂಜಾನೆಯಿಂದ ಸಂಜೆವರೆಗೆ ಪೋಷಣೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಮುಗಬಾಳ ಗ್ರಾಪಂ ವ್ಯಾಪ್ತಿಯ ನಕ್ಕನಹಳ್ಳಿಯಲ್ಲಿ ಕೂಸಿನಮನೆ ಕೇಂದ್ರವನ್ನುಉದ್ಘಾಟಿಸಿ ಮಾತನಾಡಿದರು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೂಸಿನಮನೆ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ತಾಲೂಕಿಗೂ ಇದರ ಅವಶ್ಯಕತೆ ಇರುವ ಕಾರಣ ಈ ಭಾಗದಲ್ಲಿ ಸ್ಥಾಪಿಸಲಾಗಿದೆ. ಈ ಭಾಗದ ದುಡಿಯುವ ವರ್ಗದವರು ಮಕ್ಕಳನ್ನು ನೋಡಿಕೊಳ್ಳಲಾಗದೆ ಕೆಲಸಗಳಿಗೆ ಹೋಗುತ್ತಿರಲಿಲ್ಲ. ಆದರೆ, ಕೂಸಿನಮನೆ ಕೇಂದ್ರ ಸ್ಥಾಪನೆಯಿಂದ ನಿರ್ಭೀತಿಯಿಂದ ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಕೆಲಸಗಳಿಗೆ ಹೋಗಬಹುದಾಗಿದೆ. ರೈತರೂ ಪ್ರಯೋಜನ ಪಡೆಯಬಹುದಾಗಿದ್ದು, ನುರಿತ ಮುಖ್ಯಸ್ಥರನ್ನು ಈ ಕೇಂದ್ರಕ್ಕೆ ನೇಮಕ ಮಾಡಲಾಗಿದೆ ಎಂದರು.
ಗ್ರಾಪಂ ಸದಸ್ಯೆ ವೈ.ಕೆ.ಮಂಜುಳಾ, ಪಿಡಿಒ ಲೋಕೇಶ್, ಕಾರ್ಯದರ್ಶಿ ಮೆಹಬೂಬ್, ಮುಖಂಡರಾದ ಪ್ರವೀಣ್ ಹಳ್ಳಿಗೌಡ, ಗುರುಬಸಪ್ಪ, ನಂಜಪ್ಪ ಇದ್ದರು.