ಸರ್ಕಾರಿ ಶಾಲೆಯಲ್ಲಿ ಸಮೃದ್ಧ ಜ್ಞಾನ : ಶಾಸಕಿ ಭಾಗೀರಥಿ ಅಭಿಪ್ರಾಯ

inauguation
ಪಂಜ ಸರ್ಕಾರಿ ಶಾಲೆಯ ನೂತನ ಕೊಠಡಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಸರ್ವರಿಗೂ ಸರ್ಕಾರಿ ಉದ್ಯೋಗ ಬೇಕು. ಆದರೆ ಶಿಕ್ಷಣಕ್ಕೆ ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಳ್ಳದಿರುವುದು ಸಮರ್ಪಕವಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅಸಂಖ್ಯಾತ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲೇ ಓದಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಬದುಕಿಗೆ ಬೇಕಾದ ಶಿಕ್ಷಣ ಪಡೆಯುವುದು ಅತ್ಯವಶ್ಯಕ. ಜೀವನ ನಡೆಸಲು ಬೇಕಾದ ಉತ್ಕೃಷ್ಟ ಜ್ಞಾನ ಸರ್ಕಾರಿ ಶಾಲೆಗಳಲ್ಲಿ ಯಥೇಚ್ಚವಾಗಿ ದೋರಕುತ್ತದೆ ಎಂದರು.

ಪಂಜ ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ, ಮುಖ್ಯಶಿಕ್ಷಕಿ ಲೀಲಾಕುಮಾರಿ.ವಿ.ನಡುತೋಟ, ಎಸ್‌ಡಿಎಂಸಿ ಅಧ್ಯಕ್ಷ ಸೋಮಶೇಖರ ನೇರಳ, ಉಪಾಧ್ಯಕ್ಷೆ ಲಕ್ಷ್ಮೀ ನೆಕ್ಕಿಲ ಉಪಸ್ಥಿತರಿದ್ದರು. ತೀರ್ಥಾನಂದ ಕೊಡೆಂಕಿರಿ ಮತ್ತು ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ಮಂಜುಳಾ ವಂದಿಸಿದರು.

ಸನ್ಮಾನ: ಗುತ್ತಿಗೆದಾರ ಶಬಿರ್ ಎಂ.ಎಸ್ ಬಾಳಿಲ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಕಿರಣ್ ರಾವ್ ಕೊಡುಗೆಯಾಗಿ ನೀಡಿದ ಕೊಡೆಗಳನ್ನು ಶಾಸಕರು ವಿದ್ಯಾರ್ಥಿಗಳಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net