

ಸಕಲೇಶಪುರ : ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಔಷಧಿಗಳು ದೊರಕುವುದರಿಂದ ಜನರು ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಎಸ್.ಪಿ.ರಸ್ತೆಯಲ್ಲಿರುವ ಟಿಎಪಿಸಿಎಂಸ್ ಕಟ್ಟಡದಲ್ಲಿ ನೂತನ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ದೊರಕಬೇಕು. ಜನಸಾಮಾನ್ಯರು ಸುಲಭವಾಗಿ ಔಷಧಿಗಳನ್ನು ಖರಿದೀಸಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ದೇಶದ್ಯಾಂತ ಆರಂಭಿಸಿದೆ ಎಂದರು.
ಜನೌಷಧಿ ಕೇಂದ್ರದ ಮಾಲೀಕರಾದ ಧರಣೇಶ್, ಜಯರಾಂ, ಸಂಘ ಪರಿವಾರದ ಮುಖಂಡ ನಂದನ್, ಬಿಜೆಪಿ ಮುಖಂಡ ನವೀನ್ ಶೆಟ್ಟಿ ತರರು ಇದ್ದರು.