ನೂತನ ಬಸ್ ತಂಗುದಾಣಗಳ ಉದ್ಘಾಟನೆ

23
Published on

ಮೈಸೂರು: ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣಗಳನ್ನು ಸೋಮವಾರ ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಿದರು.
ಕ್ಷೇತ್ರದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ 10 ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಜೆ.ಎಲ್.ಬಿ. ರಸ್ತೆ, ಸಿದ್ದಪ್ಪ ವೃತ್ತ, ಹಾರ್ಡಿಂಗ್ ವೃತ್ತ, ಶಾಂತಿ ಸಾಗರ್ ಮುಂತಾದ ಕಡೆ ನಿರ್ಮಿಸಿರುವ ಬಸ್ ತಂಗುದಾಣಗಳನ್ನು ಉದ್ಘಾಟಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸಾರ್ವಜನಿಕರು ಮತ್ತು ಪ್ರಯಾಣಿಕಕರು ತಂಗುದಾಣಗಳ ಅನುಕೂಲ ಪಡೆದುಕೊಳ್ಳಬೇಕು. ಬಸ್ ತಂಗುದಾಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ತಂಗುದಾಣದ ಗೋಡೆಗಳಿಗೆ ಭಿತ್ತಿ ಪತ್ರ ಅಂಟಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಮೇಯರ್ ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಸೌಮ್ಯಾ ಉಮೇಶ್, ರಮೇಶ್ , ಮುಖಂಡರಾದ ಜೋಗಿ ಮಂಜು, ಉಮೇಶ್, ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net