ಒತ್ತಡ ಕಡಿಮೆ ಮಾಡಿಕೊಳ್ಳಲು ಮನರಂಜನೆ ಅವಶ್ಯ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅಭಿಮತ

Inauguration of new building of Mandya Club
Published on

ಮಂಡ್ಯ: ಮನುಷ್ಯನ ಒತ್ತಡದ ಬದುಕಿನಲ್ಲಿ ಮನರಂಜನೆಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕ್ಲಬ್‌ಗಳು ಹುಟ್ಟಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಿಸಿದರು.

ನಗರದ ಹೊರವಲಯದ ವಿ.ಸಿ ಫಾರ್ಮ್‌ನ ಮುಖ್ಯರಸ್ತೆಯ ರೈಲ್ವೆ ಗೇಟ್ ಸಮೀಪ ಮಂಡ್ಯ ಕ್ಲಬ್ ನೂತನ ಕಟ್ಟಡ ಹಾಗೂ ಕ್ಲಬ್‌ನ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಹತ್ತು ವರ್ಷದ ಹಿಂದೆ ಮಂಡ್ಯ ಕ್ಲಬ್ ಪ್ರಾರಂಭವಾಗಿತ್ತು. ಈಗ 32 ಗುಂಟೆ ವಿಶಾಲವಾದ ನಿವೇಶನ ಖರೀದಿ ಮಾಡಿ ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಕಟ್ಟಡಕ್ಕೆ ನನ್ನ ವಿಧಾನ ಪರಿಷತ್ ಸದಸ್ಯದ ಅವಧಿಯ ಅನುದಾನ ಉಳಿದಿದ್ದರೆ ಕಾಂಪೌಂಡ್ ನಿರ್ಮಾಣಕ್ಕೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಮಂಡ್ಯ ಕ್ಲಬ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಮಂಡ್ಯ ಕ್ಲಬ್‌ನ 220 ಜನ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ 22 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವನ್ನು ಕ್ಲಬ್‌ನ ಚಟುವಟಿಕೆಗಳಿಗೆ ಉಪಯೋಗಿಸಲಾಗುವುದು. ಮುಂದಿನ ದಿನಗಳಲ್ಲಿ ಸುಸಜ್ಜಿತವಾದ ಕಾಂಪ್ಲೆಕ್ಸೃ್ ಹಾಗೂ ಕಮ್ಯುನಿಟಿ ಹಾಲ್ ಮಾಡಿ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಮುನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿದರು. ಕ್ಲಬ್ ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ, ಸಹ ಕಾರ್ಯದರ್ಶಿ ಲಿಂಗೇಗೌಡ, ಖಜಾಂಚಿ ಸಿ.ಎಸ್.ಮಂಜು, ಕ್ರೀಡಾ ಸಂಚಾಲಕ ಕೆ.ಎಲ್.ರಾಜಶೇಖರ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ಗುರುಸ್ವಾಮಿ, ಕೆ.ಎಸ್.ಹೊನ್ನೇಗೌಡ, ಶಂಕರ್, ಜಿ.ಸಿ.ರಾಮು, ಕೆ.ಎಸ್.ಆನಂದ್, ಕೆ.ರವಿ, ಎಂ.ಸಿ.ಶ್ರೀಕಂಠೇಗೌಡ, ವ್ಯವಸ್ಥಾಪಕ ಬಿ.ಪಿ.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net