ಗ್ರಾಮದ ಎಲ್ಲ ಜನರಿಗೆ ಸೌಕರ್ಯ ಸಿಗಲಿ : ಸುನೀಲ್ ಕುಮಾರ್

anganavandi
ಮುನಿಯಾಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಅಂಗನವಾಡಿ ಕಟ್ಟಡ ಶಾಸಕ ವಿ.ಸುನೀಲ್‌ಕುಮಾರ್ ಉದ್ಘಾಟಿಸಿದರು
Published on

ಹೆಬ್ರಿ: ಅಂಗನವಾಡಿ ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಅಡಿಪಾಯ ಇಲ್ಲಿಂದ ಪ್ರಾರಂಭವಾದಾಗ, ಆ ಮಕ್ಕಳು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಹಾಯವಾಗುತ್ತದೆ. ಅಂಗನವಾಡಿ ಕೇಂದ್ರದ ಸದುಪಯೋಗವಾಗಲಿ, ಗ್ರಾಮದ ಎಲ್ಲ ಜನರಿಗೆ ಸೌಕರ್ಯ ಸಿಗಲಿ ಎಂದು ಶಾಸಕ ಸುನೀಲ್ ಕುಮಾರ್ ಹಾರೈಸಿದರು.

ಮುನಿಯಾಲಿನಲ್ಲಿ ಲೋಕಸಭಾ ಸದಸ್ಯರ ಅನುದಾನ, ಹೆಬ್ರಿ ತಾಪಂ, ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವರಂಗ ಗ್ರಾಪಂ ಅಧ್ಯಕ್ಷ ಸಂತೋಷ್ ಅಮೀನ್ ಅಂಡಾರು, ಉಪಾಧ್ಯಕ್ಷೆ ಪ್ರಮೀಳಾ ನಾಯ್ಕ, ನಿಕಟಪೂರ್ವ ಜಿಪಂ ಸದಸ್ಯೆ ಜ್ಯೋತಿ ಹರೀಶ್, ಉದ್ಯಮಿ ದಿನೇಶ್ ಪೈ, ವೈದ್ಯ ಡಾ.ಸುದರ್ಶನ್ ಹೆಬ್ಬಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ವಿಜಯ ನಾರಾಯಣಿ ನಾಯ್ಕ, ಸುರೇಂದ್ರ ಶೆಟ್ಟಿ, ಗುತ್ತಿಗೆದಾರ ಸಮೃದ್ಧಿ ಪ್ರಕಾಶ್ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಉಷಾ, ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net