

ವಿಜಯವಾಣಿ ಸುದ್ದಿಜಾಲ ಬೈಂದೂರು
ಆರೋಗ್ಯ ಕಾಳಜಿ ಹಾಗೂ ರಕ್ಷಣೆಯ ಧ್ಯೇಯದೊಂದಿಗೆ ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಅರ್ಹರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಉಪ್ಪುಂದ ಗ್ರಾಮದ ತಾರಪತಿ ಹಾಗೂ ತಗ್ಗರ್ಸೆ ಗ್ರಾಮದ ವಸ್ರೆಯಲ್ಲಿ ಭಾನುವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರೇಮಾನಂದ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ತಾಪಂ ಮಾಜಿ ಸದಸ್ಯ ಸದಾಶಿವ ಪಡುವರಿ, ಗ್ರಾಪಂ ಮಾಜಿ ಸದಸ್ಯ ನಾಗರಾಜ ಗಾಣಿಗ ಬಂಕೆಶ್ವರ, ಉದ್ಯಮಿ ಬಾಬು ಪೂಜಾರಿ ಕಿರುಕ್ಕಿ ಮತ್ತಿತರರು ಇದ್ದರು.
ಅನೇಕ ಸೌಲಭ್ಯಗಳು ನಮ್ಮ ಬಳಿಗೆ ಬರುತ್ತಿವೆ. ವ್ಯವಸ್ಥೆ ಒದಗಿಸುವುದು ಎಷ್ಟು ಮುಖ್ಯವೋ ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಳ್ಳುವುದು ಅವಶ್ಯಕ. ಗ್ರಾಮೀಣ ಭಾಗದಲ್ಲಿ ನಮ್ಮ ಕ್ಲಿನಿಕ್ನಿಂದ ಉತ್ತಮ ಪ್ರಯೋಜನ ಆಗಬೇಕು. ಆರೋಗ್ಯ ಕಾಳಜಿ ಹಾಗೂ ಆರೋಗ್ಯ ರಕ್ಷಣೆ ಧ್ಯೇಯದೊಂದಿಗೆ ಆರಂಭವಾದ ಈ ಸೇವೆ ಹೀಗೆ ಮುಂದುವರಿಯಬೇಕು. ನಮ್ಮ ಕ್ಲಿನಿಕ್ ಮೂಲಕ ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗುವಂತಾಗಲಿ. -ಗುರುರಾಜ್ ಗಂಟಿಹೊಳೆ ಶಾಸಕ https://www.vijayavani.net/blood-donation-camp-at-konchadi-school https://www.vijayavani.net/proposal-for-new-bridge-in-arate