

ಮಂಜೇಶ್ವರ: ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಶಾಸಕ ನಿಧಿಯಲ್ಲಿ, ವರ್ಕಾಡಿ ಗ್ರಾಪಂ ವ್ಯಾಪ್ತಿಯ 5 ಲಕ್ಷ ರೂ. ವೆಚ್ಚದ ಕೊಡ್ಲಮೊಗರು ದೇವಸ ರಸ್ತೆ, 15 ಲಕ್ಷ ರೂ. ವೆಚ್ಚದ ಬಜಲಕರಿಯ ಪೊಯ್ಯ ರಸ್ತೆ ಹಾಗೂ 5 ಲಕ್ಷ ರೂ. ವೆಚ್ಚದ, ತೌಡುಗೋಳಿ ಆಲಬೆ ರಸ್ತೆ ಗಳನ್ನು ಶಾಸಕ ಎ.ಕೆ.ಎಂ.ಅಶ್ರಫ್ ಬುಧವಾರ ಲೋಕಾರ್ಪಣೆಗೊಳಿಸಿದರು.
ಗ್ರಾಪಂ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದರು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೇಖರ್, ಪಂಚಾಯಿತಿ ಸದಸ್ಯರಾದ ಅಬ್ದುಲ್ ಮಜೀದ್ ಬಿ.ಎ, ಉಮ್ಮರ್, ಪದ್ಮಾವತಿ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್ ಪಾತೂರು, ಮಾಜಿ ಸದಸ್ಯರಾದ ಮುಹಮ್ಮದ್ ಮಜಾಲ್, ನಿಕೋಲಸ್ ಮೊಂತೆರೋ, ಹಸೈನಾರ್ ದೇವಸ, ಮುಹಮ್ಮದ್ ದೇವಸ, ಅಬ್ದುಲ್ ಕರೀಂ ಮಾಸ್ಟರ್, ಸಿದ್ದೀಕ್ ಕೊಡ್ಲಮೊಗರು, ರೋನಿ ಡಿಸೋಜ, ಗೋಡ್ವಿನ್, ಭಾಸ್ಕರ್ ಪೊಯ್ಯ, ಫೆಲಿಕ್ಸ್ ಡಿಸೋಜ, ಮುಹಮ್ಮದ್ ಬಟ್ಯಡ್ಕ, ಲತೀಫ್ ತೋಕೆ, ಕುಂಞಿ ಟಿ.ಎಂ, ಮೊಯ್ದಿನ್ ಕುಂಞಿ ತೋಕೆ ಮೊದಲಾದವರು ಭಾಗವಹಿಸಿದರು. ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.