ಹೊನ್ನಾವರದಲ್ಲಿ ಸಚಿವರ ಕಾರ್ಯಾಲಯ ಉದ್ಘಾಟನೆ

MINISTER
Published on

ಹೊನ್ನಾವರ: ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಚಿವರ ಕಾರ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬುಧವಾರ ಉದ್ಘಾಟಿಸಿ, ಸಾಂಕೇತಿಕವಾಗಿ ಜನರ ಅಹವಾಲು ಸ್ವೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದಿನ ಭಟ್ಕಳ ಶಾಸಕರ ಕಚೇರಿಯನ್ನು ಕುಮಟಾ ಶಾಸಕರು ಪಡೆದಿದ್ದರಿಂದ ಕಚೇರಿ ಮಾಡಲು 2-3 ತಿಂಗಳ ವಿಳಂಬವಾಗಿದೆ. ಇದರಿಂದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಚೇರಿ ತೆರೆದಿರುತ್ತದೆ ಎಂದರು.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ಗೆ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಹೆಬ್ಬಾರ ಅವರು ಬೇರೆ ಮನೆಯಿಂದ ಬರುತ್ತಿಲ್ಲ. ಅವರ ಮನೆಯಿಂದಲೇ ಏನೋ ಸ್ವಲ್ಪ ವ್ಯತ್ಯಾಸವಾಗಿ ಹೋಗಿದ್ದರು. ಈಗ ಬರ‌್ತಾ ಇದ್ದಾರೆ ಎಂದರು.

ಮುಗ್ವಾ ಗ್ರಾ.ಪಂ. ಅಧ್ಯಕ್ಷ ಐ.ವಿ. ನಾಯ್ಕ, ಗೋವಿಂದ ನಾಯ್ಕ, ಜಗದೀಪ ತೆಂಗೇರಿ, ನಿವೇದಿತ ಆಳ್ವಾ, ವಿ.ಎನ್. ಭಟ್, ಮಂಜುನಾಥ ನಾಯ್ಕ, ಪುಷ್ಪಾ ನಾಯ್ಕ, ವನಿತಾ ನಾಯ್ಕ, ಸತೀಶ ನಾಯ್ಕ, ಉಲ್ಲಾಸ ನಾಯ್ಕ, ಕೃಷ್ಣ ಗೌಡ, ಚಂದ್ರಕಾಂತ ಕೊಚರೆಕರ್, ಫೈಸಲ್ ಮಸ್ತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net