

ವಿಜಯವಾಣಿ ಸುದ್ದಿಜಾಲ ಉಡುಪಿ
ಕುಂಜಿಬೆಟ್ಟು ವಾರ್ಡ್ನ ನಾಗರಿಕರ ಅಪೇಕ್ಷೆಯಂತೆ ಸುಧೀಂದ್ರ ತೀರ್ಥ ಮಂಟಪ ರಸ್ತೆಯ ತಿರುವಿನಲ್ಲಿ ನಗರಸಭೆಯ ವತಿಯಿಂದ 1.50 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ಮಿನಿ ಮಾಸ್ಟ್ ದೀಪವನ್ನು ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರವಿರಾಜ ಆಚಾರ್ಯ ಜುಲೈ 17ರಂದು ಸಂಜೆ ಉದ್ಘಾಟಿಸಿದರು.
ವಾರ್ಡ್ನ ಹಿರಿಯ ನಾಗರಿಕರಾದ ಮಾವುಜಿ ಪಟೇಲ, ಜಯಂತಿಲಾಲ್ ಪಟೇಲ, ಈಶ್ವರಲಾಲ್ ಪಟೇಲ, ಸೀತಾರಾಮ ತಂತ್ರಿ, ವಿಠ್ಠಲ ಆಚಾರ್ಯ, ಲಕ್ಷ್ಮೀನಾರಾಯಣ ಹೆಗ್ಡೆ, ಎ.ಜಿ. ಭಟ್, ಶಿವರಾಜ ಅಂಚನ್, ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಬೂತ್ ಸಮಿತಿ ಸದಸ್ಯ ಸತೀಶ ಬಿ., ಚಂದ್ರಶೇಖರ ಪ್ರಭು, ಸಂತೋಷ ಪಟೇಲ ಉಪಸ್ಥಿತರಿದ್ದರು.
ರಸ್ತೆ ತಿರುವು ಇರುವುದರಿಂದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಅಪಘಾತ ಸಂಭವಿಸುತ್ತಿದ್ದು, ಸಾರ್ವಜನಿಕರ ಅಪೇಕ್ಷೆಯಂತೆ ಮಿನಿ ಮಾಸ್ಟ್ ದೀಪ ಅಳವಡಿಸಲಾಗಿದೆ. ಈ ಕಾರ್ಯಕ್ಕೆ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷ ಪ್ರಬಾಕರ ಪೂಜಾರಿ ತ್ವರಿತ ಗತಿಯಲ್ಲಿ ಸಹಕರಿಸಿದ್ದಾರೆ. | ಗಿರೀಶ ಎಂ. ಅಂಚನ್. ಕುಂಜಿಬೆಟ್ಟು ವಾರ್ಡ್ ಸದಸ್ಯ