

ಅರಕಲಗೂಡು: ತಾಲೂಕಿನ ಬಿಸಿಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಶೀತಲೀಕರಣ ಕೇಂದ್ರವನ್ನು ಶಾಸಕ ಎ.ಟಿ. ರಾಮಸ್ವಾಮಿ ಉದ್ಘಾಟಿಸಿದರು.
ಶೀತಲೀಕರಣ ಕೇಂದ್ರದಲ್ಲಿ ಬಿಸಲಹಳ್ಳಿಯಲ್ಲಿ ಉತ್ಪಾದನೆಯಾಗುವ 1 ಸಾವಿರ ಲೀಟರ್ ಹಾಲು ಸೇರಿದಂತೆ ಅಕ್ಕಲವಾಡಿ, ಕೆರೆಕೋಡಿ, ಹಂಡ್ರಂಗಿ, ಕಾರ್ಗಲ್ ಹೊನಗಾನಹಳ್ಳಿಯ ಸಂಘಗಳಲ್ಲಿ ಸಂಗ್ರಹವಾದ ಹಾಲನ್ನು ತಂದು ಶೀತಲೀಕರಿಸಿ ನಂತರ ಕೊಡಗಿನ ಕೂಡಿಗೆ ಡೇರಿಗೆ ಸಾಗಿಸಲಾಗುವುದು ಎಂದು ಹೇಳಿದರು.
ಹಾಸನ ಹಾಲು ಒಕ್ಕೂಟದ ವಿಸ್ತರಾಣಾಧಿಕಾರಿ ಗಂಗಾಧರ್, ಸುರೇಶ್, ಮೋಹನ್, ಸಂಘದ ಅಧ್ಯಕ್ಷೆ ಜ್ಯೋತಿ ಸಣ್ಣಸ್ವಾಮಿ, ಕಾರ್ಯದರ್ಶಿ ಜ್ಯೋತಿ ಚಂದ್ರಶೇಖರ್, ವಿಜಯಲಕ್ಷ್ಮೀ, ಕೊಣನೂರು ಗ್ರಾಪಂ ಅಧ್ಯಕ್ಷ ಕೆ.ಬಿ.ರಮೇಶ್, ಮುಖಂಡ ಪುನೀತ್ ರಾಮಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಂತಿ, ಮೇಲ್ವಿಚಾರಕಿ ಹರಿಣಾಕ್ಷಿ, ನಿವೃತ್ತ ಶಿಕ್ಷಕ ಅಣ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು.