

ಉಡುಪಿ: ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್ಕೆ ಸಹೋದರರ ಮಾಲಕತ್ವದ ಗೀತಾಂಜಲಿ ಸಿಲ್ಕ್ಸ್ ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ವಸ್ತ್ರಗಳ ವಿಭಾಗ ಬುಧವಾರ ಉದ್ಘಾಟನೆಗೊಂಡಿತು.
ಉದ್ಯಮಿ ಡಾ.ಜಿ. ಶಂಕರ್ ಹಾಗೂ ಡಾ. ಜೆರಿ ವಿನ್ಸೆಂಟ್ ಡಯಾಸ್ ಪುರುಷರ ವಿಭಾಗ ಉದ್ಘಾಟಿಸಿದರು. ಶಾಸಕ ಯಶ್ಪಾಲ್ ಸುವರ್ಣ, ಪ್ರಮುಖರಾದ ಡಾ. ರವಿರಾಜ್ ಆಚಾರ್ಯ, ಶ್ರೀಶಾ ನಾಯಕ್ ಪೆರ್ಣಂಕಿಲ, ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಮಹಮ್ಮದ್ ಮೌಲಾ, ಹಫೀಝ್ ರೆಹಮಾನ್, ನಾರಾಯಣ ಸರಳಾಯ, ಕೆ. ಶ್ರೀನಿವಾಸ್ ರಾವ್ ಶುಭ ಹಾರೈಸಿದರು.
ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್, ಅಮಿತಾ ವಾಸು ರಾಜಸ್ಥಾನ, ಮಾಲತಿ ತೀರ್ಥಹಳ್ಳಿ, ಕಿಶನ್ ಪ್ರಭು ಪಳ್ಳಿ, ಪ್ರದಿಪ್ ನಾಯಕ್ ನೀರೆ, ಪ್ರಶಾಂತ್ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ನಾರಾಯಣ ಶೆಣೈ,ಕೃಷ್ಣಮೂರ್ತಿ, ಸತ್ಯಾನಂದ ನಾಯಕ್, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಂ ಕಾರ್ಕಳ, ಪ್ರಕಾಶ್ ಪ್ರಭು, ರತ್ನಾಕರ ಪೆರ್ಡೂರು, ಆಸಿಫ್, ನಿತ್ಯಾನಂದ ನಾಯಕ್, ಸಂಸ್ಥೆಯ ಪಾಲುದಾರರಾದ ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರ ಸಂತೋಷ್ ವಾಗ್ಲೆ ಸ್ವಾಗತಿಸಿ, ರಾಮಕೃಷ್ಣ ನಾಯಕ್ ವಂದಿಸಿದರು. ನಿಖಿತಾ ಎರ್ಲಪಾಡಿ ನಿರೂಪಿಸಿದರು.
ಒಂದೇ ಸೂರಿನಡಿ 22ಕ್ಕೂ ಅಧಿಕ ಬ್ರ್ಯಾಂಡ್ಗಳು
ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳ ಪ್ರತ್ಯೇಕ ಮಹಡಿಗಳನ್ನು ಹೊಂದಿದ್ದು, ಇದೀಗ ಒಂದನೇ ಮಹಡಿಯಲ್ಲಿ ಪುರುಷರ ಸ್ವದೇಶಿ ಮತ್ತು ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್ಗಳ ಮಳಿಗೆ ಒಂದೇ ಸೂರಿನಡಿ ಲಭ್ಯವಿದೆ. ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ಪಾರಂಪರಿಕ ಮತ್ತು ಆಧುನಿಕ ಶೈಲಿಯ ಬಟ್ಟೆಗಳು, ಆಫೀಸ್ ವೇರ್, ಡೈಲಿ ವೇರ್, ಕ್ಯಾಶುವಲ್ ವೇರ್, ಪಾರ್ಟಿ ವೇರ್ಗಳ ವಿಫುಲ ಸಂಗ್ರಹವಿದೆ. ಪೀಟರ್ ಇಂಗ್ಲೆಡ್, ಲಿನನ್ ಕ್ಲಬ್, ಕಿಲ್ಲರ್, ಫ್ಲೈಯಿಂಗ್ ಮೇಶಿನ್, ಅಲನ್ ಸೂಲಿ, ವ್ಯಾನ್ ಹ್ಯುಸೆನ್, ಲೂಯಿಸ್ ಪಿಲಿಪ್ಸ್, ಜಾನ್ ಪ್ಲೇಯರ್, ಲೆವಿಸ್ ಮೊದಲಾದ ಬ್ರ್ಯಾಂಡ್ಗಳ ಶರ್ಟ್, ಕ್ಯಾಶುವಲ್ ಪ್ಯಾಂಟ್, ಜೀನ್ಸ್ ಲಭ್ಯವಿದೆ.
ಸಣ್ಣ ಅಂಗಡಿಯ ಮೂಲಕ ಸತತ ಪರಿಶ್ರಮ, ಶ್ರದ್ಧ್ದೆಯಿಂದ ಕೆಲಸ ಮಾಡಿದ ಪರಿಣಾಮ ಗೀತಾಂಜಲಿ ಸಿಲ್ಕ್$$$್ಸ ಪ್ರಸ್ತುತ ಜಿಲ್ಲೆಯಲ್ಲಿಯೇ ವೈವಿಧ್ಯಮಯ ವಸ್ತ್ರಗಳ ಬೃಹತ್ ಮಳಿಗೆಯನ್ನು ತೆರೆಯುವ ಅವಕಾಶ ಲಭ್ಯವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ, ಗುಣಮಟ್ಟದ ವಸ್ತ್ರಗಳನ್ನು ನೀಡಿದ್ದರಿಂದ ವ್ಯಾಪಾರ ಇನ್ನಷ್ಟ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ.ಡಾ.ಜಿ ಶಂಕರ್, ಉದ್ಯಮಿ
ನಾಲ್ಕು ದಶಕಗಳ ಹಿಂದೆ ಗುಣಮಟ್ಟದ ವಸ್ತ್ರಗಳ ಖರೀದಿಗೆ ಮಂಗಳೂರು ಮೊದಲಾದ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಪ್ರಸ್ತುತ ಗೀತಾಂಜಲಿನಲ್ಲಿ ಎಲ್ಲಾ ಬಗೆಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ನವೀನ ವಿನ್ಯಾಸಗಳನ್ನು ಹೊಂದಿರುವ ಉಡುಗೆ ತೊಡುಗೆಗಳು ಲಭ್ಯವಿದೆ. ಅನೇಕ ವರ್ಷದ ಹಿಂದೆ ಆರ್ಕೆ ಟೆಕ್ಸ್ಟೈಲ್ಸ್ನಲ್ಲಿ ನನಗೆ ಮತ್ತು ಮಗನಿಗೆ ಪ್ರಥಮವಾಗಿ ಸೂಟ್ ಹೊಲಿಸಿದ್ದೆ. ಕ್ಲಪ್ತ ಸಮಯದಲ್ಲಿ ನನಗೆ ಸಿಕ್ಕಿದ್ದರಿಂದ ನಿರಂತರವಾಗಿ ಇಲ್ಲಿನ ಗ್ರಾಹಕನಾಗಿದ್ದೇನೆ.ಡಾ. ಜೆರ್ರಿ ವಿನ್ಸೆಂಟ್ ಡಯಾಸ್, ಮಾಂಡೋವಿ ಬಿಲ್ಡರ್ಸ್