

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಲ್ಲದ ಕುಟುಂಬ ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದೆ. ಅವರ ಸಾಹಸ ಫಲಕಾರಿಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಭ ಹಾರೈಸಿದರು.
ನಗರ ಹೊರವಲಯದ ನರೇಂದ್ರ ಬೈಪಾಸ್ ಬಳಿ ಪ್ರಶಾಂತ ಬೆಲ್ಲದ ಮಾಲೀಕತ್ವದಲ್ಲಿ ನಿರ್ಮಿಸಿದ ಮಾಸ್ಟಿಫ್ ಗ್ರ‍್ಯಾಂಡ್ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಲ್ಲದ ಕುಟುಂಬದ ಶೋ ರೂಂ ಅನ್ನು ನನ್ನ ತಂದೆ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದರು. ಇದೀಗ ಅವರ ಹೋಟೆಲ್ ಉದ್ಘಾಟನೆ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ. ಹುಬ್ಬಳ್ಳಿಯಲ್ಲಿ ಇಂಥ ಅನೇಕ ಹೋಟೆಲ್‌ಗಳು ಇವೆ. ಧಾರವಾಡದಲ್ಲೂ ಸುಸಜ್ಜಿತ ಹೋಟೆಲ್ ಅಗತ್ಯವಿತ್ತು. ಈ ಬೇಡಿಕೆಯನ್ನು ಬೆಲ್ಲದ ಕುಟುಂಬ ನೆರವೇರಿಸಿದೆ. ಈ ಭಾಗದ ಜನರಿಗೆ ಸುಸಜ್ಜಿತ ಹೋಟೆಲ್ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಕೇAದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಹೋಟೆಲ್ ಎಂಡಿ ಪ್ರಶಾಂತ ಬೆಲ್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಹೋಟೆಲ್ ಸಿಒಒ ಎ.ಆರ್. ಕಾಶಿರಾಮನ್, ಇತರರಿದ್ದರು.