ಮನೋಲ್ಲಾಸ ಕೇಂದ್ರ ಉದ್ಘಾಟನೆ ನಾಳೆ

MEDIA
Published on

ನಗರದ ಗೌರಿಶಂಕರನಗರ ಮೂರನೇ ಅಡ್ಡರಸ್ತೆಯ ಕ್ರೆಡಿಟ್ ಐ ಸಂಸ್ಥೆ ಕಚೇರಿಯಲ್ಲಿ ಆ.24 ರಂದು ಬೆಳಗ್ಗೆ 10.30ಕ್ಕೆ ವನಜಾಕ್ಷಿ ವರ್ಷ ಮಹಿಳಾ ಮತ್ತು ಯುವ ಸಬಲೀಕರಣ ಕೇಂದ್ರ ಹಾಗೂ ಮನೋಲ್ಲಾಸ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ.ವರ್ಷ ತಿಳಿಸಿದರು.

ಕೇಂದ್ರವನ್ನು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಉದ್ಘಾಟಿಸಲಿದ್ದು, ಶಾಸಕ ಟಿ.ಎಸ್.ಶ್ರೀವತ್ಸ ಅತಿಥಿಗಳಾಗಿ ಆಗಮಿಸಲಿದ್ದಾರೆ. ದೇಶದ ತಳಹದಿಯಾಗಿರುವ ಮಹಿಳೆಯರು ಹಾಗೂ ಯುವಜನರಿಗೆ ಉದ್ಯಮಶೀಲತೆ, ಕೌಶಲ ಅಭಿವೃದ್ಧಿ ಮತ್ತು ಉನ್ನತೀಕರಣ ಈ ಕೇಂದ್ರದಲ್ಲಿ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಮಾನಸಿಕ, ದೈಹಿಕವಾಗಿ ವಿಭಿನ್ನ ರೀತಿಯ ಸಮಸ್ಯೆಗಳಿಗೆ ಸಿಲುಕಿರುವ ಮಹಿಳೆಯರು, ಯುವಜನ ಮತ್ತು ವಿದ್ಯಾರ್ಥಿಗಳಿಗೆ ಪರಿಣತರಿಂದ ಆಪ್ತ ಸಮಾಲೋಚನೆ ದೊರಕಲಿದೆ. ಈ ಎಲ್ಲ ಸೇವೆಗಳೂ ಉಚಿತವಾಗಿ ದೊರಕಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಂ.ಆರ್.ಮಂಜುನಾಥ್, ಪ್ರೊ.ಎಂ.ಎಸ್.ಮನೋನ್ಮಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net