ಮಂದಾರ್ತಿ ಭಜನಾ ಕಾರ್ಯಾಲಯ ಉದ್ಘಾಟನೆ

bhajane
ಮಂದಾರ್ತಿ ಕುಣಿತ ಭಜನಾ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆಗೊಂಡಿತು.
Published on

ಕೊಕ್ಕರ್ಣೆ: ಮಂದಾರ್ತಿಯ ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ಜ.18ರಂದು ನಡೆಯಲಿರುವ ಸಂಕೀರ್ತನ ಮಂದಾರ್ತಿ ಕುಣಿತ ಭಜನಾ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಮಂದಾರ್ತಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಎಚ್. ಧನಂಜಯ ಉದ್ಘಾಟಿಸಿದರು. ಲೋಕೇಶ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀರಾಮ ಭಜನಾ ಮಂಡಳಿಯಿಂದ ಭಜನೆ ನೆರವೇರಿತು. ಹಿರಿಯರಾದ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು, ವಿಶ್ವನಾಥ ಉಡುಪ ಶುಭಹಾರೈಸಿದರು. ಪ್ರಮುಖರಾದ ಎಚ್.ಗಂಗಾಧರ್ ಶೆಟ್ಟಿ, ಎಚ್.ಸುದರ್ಶನ್ ಶೆಟ್ಟಿ, ಎಚ್.ಹರೀಶ್ಚಂದ್ರ ಶೆಟ್ಟಿ, ರಾಮಕೃಷ್ಣ ಶೇಡಿಕೊಡ್ಲು, ಕೃಷ್ಣ ನಾಯ್ಕ, ಗಣೇಶ ಭಟ್ ನಾಯರಬೆಟ್ಟು, ಉದಯ ಭಾಸ್ಕರ್ ಶೆಟ್ಟಿ, ಪ್ರಕಾಶ್ ನಡೂರು, ನಾರಾಯಣ ಆಚಾರ್ ನಡೂರು, ನಮಸ್ತೆ ಭಾರತ್ ಟ್ರಸ್ಟ್ ಪದಾಧಿಕಾರಿಗಳು, ಶ್ರೀರಾಮ ಭಜನಾ ಮಂಡಳಿ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net