ತಿ.ನರಸೀಪುರ: ತಾಲೂಕಿನ ಸೋಸಲೆ ಹೋಬಳಿ ದೊಡ್ಡಬಾಗಿಲು ಮೋಳೆ ಗ್ರಾಮದಲ್ಲಿ ಜೂನ್ 2ರಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮೇ 31ರಂದು ಸಂಜೆ 7 ಗಂಟೆಗೆ ಅನುಜ್ಞೆ ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ರಕ್ಷಾ ಬಂಧನ, ಯಾಗಶಾಲಾ ಪ್ರವೇಶವಾಗಲಿದೆ. ಜೂ.1ರಂದು ಬೆಳಗ್ಗೆ ನಿತ್ಯಹೋಮ, ಧಾನ್ಯಾದಿವಾಸ, ವಾಯಾದಿವಾಸ, ಸಂಜೆ ನಿತ್ಯಹೋಮ. ಜಲಾದಿವಾಸ, ಶಯಾದಿವಾಸ ನೆರವೇರಲಿದೆ. ಜೂ.2ರಂದು ಬೆಳಗ್ಗೆ ನಿತ್ಯಹೋಮ, ಅಭಿಷೇಕ, ಪ್ರಧಾನ ಹೋಮ, ಪ್ರತಿಷ್ಠಾವಿಧಿಯ ಬಳಿಕ ಕುಂಭಾಭಿಷೇಕ, ಮಹಾಮಂಗಳಾರತಿ ನಂತರ ದೇವಸ್ಥಾನ ಉದ್ಘಾಟನೆ ನಡೆಯಲಿದೆ.
ಕಾರ್ಯವನ್ನು ಶ್ರೀ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಸರಗೂರು ಮಠದ ರಾಜು ಸ್ವಾಮಿ ಐಯ್ಯನವರು, ರಂಗಸ್ವಾಮಿ ಐಯ್ಯನವರು, ಮಹದೇವಸ್ವಾಮಿ ಐಯ್ಯನವರು, ಸಿದ್ದಪ್ಪಸ್ವಾಮಿ ಐಯ್ಯನವರು ಹಾಗೂ ಇನ್ನಿತರ ಗಣ್ಯರು ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.