ಡಿ.ದೇವರಾಜ ಅರಸು ಆಡಳಿತ ಮಾದರಿ: ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು ಅಭಿಮತ

1 (2)
Published on

ಮಂಡ್ಯ: ಡಿ.ದೇವರಾಜು ಅರಸು ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಪ್ರತಿ ಸಮುದಾಯಕ್ಕೂ ಆದ್ಯತೆ ನೀಡಿದ್ದರು ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅರಸು ಅವರ ಆಡಳಿತ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಮೈಸೂರು ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಶ್ರೀಕೃಷ್ಣದತ್ತ ಒಡೆಯರ್ ಸೇರಿದಂತೆ ನಾಡನ್ನಾಳಿದ ಮಹಾಪ್ರಭುಗಳು ಪ್ರಜೆಗಳಿಗೆ ತಮ್ಮದೇ ಆಡಳಿತ ಕುರುಹು ಬಿಟ್ಟು ಹೋಗಿದ್ದಾರೆ ಎಂದರು.

ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಅಧ್ಯಕ್ಷೆ ಇಂದುಕಲಾ ಅರಸ್ ಮಾತನಾಡಿ, ಜಿಲ್ಲೆಯಲ್ಲಿ ಕೆಂಪನಂಜಮ್ಮಣ್ಣಿ ಮತ್ತು ಡಿ.ದೇವರಾಜ ಅರಸು ಪ್ರತಿಮೆ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದರು. ಉಪಪ್ರಾಂಶುಪಾಲೆ ನಾಗಲಕ್ಷ್ಮೀ ಚೌಧರಿ, ದೇವಿರಮ್ಮಣ್ಣಿ, ವಿನೋದ ಅರಸ್, ರಜನಿ, ಪ್ರತಿಮಾ, ಮಮತಾ, ತೇಜಶ್ವಿನಿ, ತನುಜಾ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಕಾರ್ಕಳ್ಳಿ ಕೆಂಪಮ್ಮ, ಮಂಜುಳಾ, ಕೆ.ಪಿ.ಅರುಣ್‌ಕುಮಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net