ವಾಟಾಳು ಮಠದಲ್ಲಿ ಮಹಾಸಭಾ ಪದಾಧಿಕಾರಿಗಳ ಪದಗ್ರಹಣ

ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಸೂರ್ಯ ಸಿಂಹಾಸನ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರು ಪದಗ್ರಹಣ ಮಾಡಿದರು. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿನಕಲ್ ಬಸವರಾಜ್, ಸಿ.ಎಂ.ಪ್ರಕಾಶ್, ತೊಟ್ಟವಾಡಿ ಮಹದೇವಸ್ವಾಮಿ, ಎಸ್.ಕೆ.ಕಿರಣ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಸೂರ್ಯ ಸಿಂಹಾಸನ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರು ಪದಗ್ರಹಣ ಮಾಡಿದರು. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿನಕಲ್ ಬಸವರಾಜ್, ಸಿ.ಎಂ.ಪ್ರಕಾಶ್, ತೊಟ್ಟವಾಡಿ ಮಹದೇವಸ್ವಾಮಿ, ಎಸ್.ಕೆ.ಕಿರಣ್ ಇತರರು ಇದ್ದರು.
Published on

ತಿ.ನರಸೀಪುರ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರು ಸೋಮವಾರ ತಾಲೂಕಿನ ವಾಟಾಳು ಗ್ರಾಮದ ಶ್ರೀ ಸೂರ್ಯಸಿಂಹಾಸನ ಮಠದಲ್ಲಿ ಪದಗ್ರಹಣ ಮಾಡಿದರು.

ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಸಭಾದ ಗೌರವಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಿರ್ಗಮಿತ ಅಧ್ಯಕ್ಷ ತೊಟ್ವವಾಡಿ ಮಹದೇವಸ್ವಾಮಿ ಅವರು ನೂತನ ಅಧ್ಯಕ್ಷ ಸಿ.ಬಿ ಹುಂಡಿ ಗ್ರಾಮದ ಸಿ.ಎಂ ಪ್ರಕಾಶ್ ಅವರಿಗೆ ಮಹಾಸಭಾದ ಜವಾಬ್ದಾರಿಯನ್ನು ಹಸ್ತಾಂತರಿಸಿದರು.

ಅಧ್ಯಕ್ಷ ಸಿ.ಎಂ.ಪ್ರಕಾಶ್ ಮಾತನಾಡಿ, ವಾಟಾಳು ಶ್ರೀಗಳು ಹಾಗೂ ಜಿಲ್ಲಾ ಘಟಕದ ಮಾರ್ಗದರ್ಶನದಲ್ಲಿ ಸಮುದಾಯದ ಸಂಘಟನೆಗೆ ಒತ್ತು ನೀಡುವುದರ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಜತೆಗೂಡಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್, ರಾಷ್ಟ್ರೀಯ ಸಮಿತಿ ಸದಸ್ಯ ಖಂಡೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೂರ ಶಿವಕುಮಾರ್, ನೂತನ ನಿರ್ದೇಶಕರಾದ ಎಸ್.ಬಿ.ಸುಗಂಧರಾಜು, ಓಂಕಾರ್‌ಸ್ವಾಮಿ, ನಂಜುಂಡಸ್ವಾಮಿ, ಮಲ್ಲಣ್ಣ, ಹೊಸೂರುಹುಂಡಿ ತೋಂಟೇಶ್, ಬೆನಕನಹಳ್ಳಿ ವಿಜಯಕುಮಾರ್, ಕಾರ್ ಮಲ್ಲಪ್ಪ, ಸುರೇಶ್, ಎಸ್.ಕೆ.ಕಿರಣ್, ಪರಶಿವಮೂರ್ತಿ, ಕುರುಬೂರು ಶಿವು, ಗುರುಸ್ವಾಮಿ, ತೊಟ್ಟವಾಡಿ ಶಿವಕುಮಾರ್, ಅಶ್ವಿನಿ ಮಲ್ಲಿಕಾರ್ಜುನ, ಸವಿತಾ ಮಹದೇವಸ್ವಾಮಿ, ಜ್ಞಾನೇಶ್ವರಿ, ಅಂಬಿಕಾ ಲೋಕೇಶ್, ಸುಧಾ ರಮೇಶ್, ಮಲ್ಲಿಕಾ ಮಂಟೇಸ್ವಾಮಿ, ರಾಜಮ್ಮ ರಾಜಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net