

ನಾಪೋಕ್ಲು: ಬಲಮುರಿಯ ಮಹಾದೇವ ಸ್ಪೋರ್ಟ್ಸ್ ಕ್ಲಬ್ನ ನೂತನ ಕಚೇರಿ ಉದ್ಘಾಟನೆ ಶುಕ್ರವಾರ ಬಲಮುರಿಯಲ್ಲಿ ನಡೆಯಿತು.
ಕ್ಲಬ್ಗೆ 72 ವರ್ಷಗಳ ಇತಿಹಾಸವಿದ್ದು, ಬಲಮುರಿ ದವಸ ಭಂಡಾರ ಕಟ್ಟಡದ ಮಹಡಿಯಲ್ಲಿ ಕ್ಲಬ್ನ ನೂತನ ಕಚೇರಿಯನ್ನು ಪಾರಣೆ ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ಉದ್ಘಾಟಿಸಿ ಶುಭ ಹಾರೈಸಿದರು. ಬಲಮುರಿ ಈಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಗಣ ಹೋಮ ಮತ್ತು ಪೂಜಾ ಕೈಂಕರ್ಯ ನೆರವೇರಿತು.
ಕ್ಲಬ್ನ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ಉಪಾಧ್ಯಕ್ಷ ಗುಡ್ಡೇರ ಲಕ್ಷು, ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ, ಸಹ ಕಾರ್ಯದರ್ಶಿ ಬೊಳ್ಳಚೆಟ್ಟಿರ ಅಚ್ಚಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಬಿದ್ದಂಡ ಸಂದೀಪ್ ನಂಜಪ್ಪ, ಪಾರಣೆ ವಿಎಸ್‌ಎಸ್‌ಎನ್ ಸದಸ್ಯೆ ಮೇಡತನ ರಶ್ಮಿ ಇತರರು ಹಾಜರಿದ್ದರು.