

ಉಡುಪಿ: ದೇವರ ಆಶೀರ್ವಾದವಿದ್ದರೆ ಮಾತ್ರ ಯಾವುದೇ ಕೆಲಸದಲ್ಲಿ ಪ್ರಗತಿ ಸಾಧ್ಯವಿದೆ. ಕನಸು ಕಾಣುವುದು ಸುಲಭ. ಆದರೆ ನನಸು ಮಾಡುವುದು ಕಷ್ಟ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ. ಸುಶೀಲ್ ಜತ್ತನ್ನ ಅವರ ಪರಿಪಕ್ಷತೆ ಮತ್ತು ಶಿಸ್ತು ಮಾದರಿಯಾಗಿದೆ ಎಂದು ಸಿಎಸ್ಐ&ಕೆಎಸ್ಡಿ ಬಿಷಪ್ ಹೇಮಚಂದ್ರಕುಮಾರ್ ಹೇಳಿದರು.
ಲೋಂಬಾರ್ಡ್ ಮೆಮೋರಿಯಲ್ ಮಿಷನ್ ಹಾಸ್ಪಿಟಲ್ನ ಆವರಣದಲ್ಲಿ ಡಾಕ್ಟರ್ಸ್ ಕ್ಯಾಂಟೀನ್ನ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್ನ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ಕ್ಯಾಂಟಿನ್ ಪ್ರಾರಂಭಿಸುವ ಸಂದರ್ಭದಲ್ಲಿ 5 ಮಾನದಂಡಗಳನ್ನು ಅನುಸರಿಸಿದ್ದೇವೆ. ಗುಣಮಟ್ಟದ ಆಹಾರ, ಶುಚಿತ್ವ, ಪಥ್ಯ ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ನೂತನ ಓಟಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರತ್ಯೇಕ ಹೃದ್ರೋಗ ವಿಭಾಗ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಬಡಗಬೆಟ್ಟು ಕೋ&ಆಪ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಿಎಸ್ಐ&ಕೆಎಸ್ಡಿ ಉಡುಪಿ ವಿಭಾಗದ ಅಧ್ಯಕ್ಷ ರೆ. ಐವನ್ ಡಿಸೋನ್ಸ್, ಎಲ್ಎಂಎಚ್ ಕ್ಯಾಂಟೀನ್ನ ಗುತ್ತಿಗೆದಾರ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಸ್ವಾಗತಿಸಿದರು. ಪಿಆರ್ಒ ರೋನಿ ರತ್ನಾಕರ್ ವಂದಿಸಿದರು.