28ಕ್ಕೆ ಲೋಕಸಭಾ ಕಚೇರಿ ಉದ್ಘಾಟನೆ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ನಗರ ಬೂತ್‌ಮಟ್ಟದ ಸಭೆಯನ್ನು ಮಾ.26ರಂದು ಬೆಳಗ್ಗೆ 11ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ನಡೆಸಲಾಗುವುದು. ಮಾ.28ರಂದು ಮನೆಯಲ್ಲೇ ಲೋಕಸಭಾ ಕ್ಷೇತ್ರದ ಕಾರ್ಯಾಲಯ ಉದ್ಘಾಟಿಸಲಾಗವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಲ್ಲೇಶ್ವರ ಗುಂಡಪ್ಪಶೆಡ್‌ನಲ್ಲಿ ಗುರುವಾರ ಶಿವಮೊಗ್ಗ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆ ನಡೆಸಿದ ಅವರು, ಆ ಸಭೆಗೆ ಗ್ರಾಮಾಂತರ ಬೂತ್‌ಮಟ್ಟದ ಕಾರ್ಯಕರ್ತರನ್ನೂ ಕರೆ ತರುವಂತೆ ಮನವಿ ಮಾಡಿದ ಈಶ್ವರಪ್ಪ, ಒಂದೊಂದು ಬೂತ್‌ನಿಂದ ಒಬ್ಬರನ್ನು ಸಭೆಗೆ ಕರೆತರಲು ಸೂಚಿಸಿದರು. ಕೆಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ. ಪ್ರಮುಖರು ಬರುವ ನಿರೀಕ್ಷೆ ಇದೆ. ಪ್ರಮುಖರು ಬರದಿದ್ದರೆ ಮಹಿಳೆಯರಿಂದ ಉದ್ಘಾಟನೆ ಮಾಡಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net