

ಮುಂಡರಗಿ: ಪಟ್ಟಣದ ಲಿಂಗರಾಜ ಸಮುದಾಯ ಭವನದಲ್ಲಿ ಆ. 23ರಂದು ಬೆಳಗ್ಗೆ 10:30ಕ್ಕೆ ಮುಂಡರಗಿ ಹಾಗೂ ಕೊಪ್ಪಳದ ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆ (ರಿ) ಆಶ್ರಯದಲ್ಲಿ ಲಿಂಗರಾಜ ಸಮುದಾಯ ಭವನ ಉದ್ಘಾಟನೆ ಹಾಗೂ ತ್ಯಾಗವೀರ ಶ್ರೀ ಲಿಂಗರಾಜರ 118ನೇ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪೊ›.ಎಂ.ಜಿ. ಗಚ್ಚಣ್ಣವರ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ, ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಶಿವಶಾಂತವೀರ ಶರಣರು ನೇತೃತ್ವ ವಹಿಸುವರು. ಸಂಸ್ಥೆಯ ಗೌರವಾಧ್ಯಕ್ಷ ಈರಪ್ಪ ಬಿಸನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಎಂ.ಬಿ. ಪಾಟೀಲ ಸಮುದಾಯ ಭವನ ಉದ್ಘಾಟಿಸುವರು. ಶಾಸಕ ಬಾಬಾಸಾಹೇಬ ಪಾಟೀಲ ಲಿಂಗರಾಜರ ಮೂರ್ತಿ ಲೋಕಾರ್ಪಣೆ ಮಾಡುವರು. ಶಾಸಕ ಜಿ.ಎಸ್. ಪಾಟೀಲ ಸ್ಮರಣ ಸಂಚಿಕೆ ಉದ್ಘಾಟಿಸಲಿದ್ದಾರೆ. ಸಂಸದ ಶಿವಕುಮಾರ ಉದಾಸಿ ಸಭಾಭವನ ಉದ್ಘಾಟಿಸುವರು. ಶಾಸಕರಾದ ಎಸ್.ವಿ. ಸಂಕನೂರ, ಡಾ. ಚಂದ್ರು ಲಮಾಣಿ, ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಎಸ್.ಎಸ್. ಪಾಟೀಲ ಭಾಗವಹಿಸಲಿದ್ದಾರೆ. ಕಟ್ಟಡ ವಿನ್ಯಾಸಕ ಶಶಿಧರ ಚವಡಿ, ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಸ್ಥೆ ಅಧ್ಯಕ್ಷ ಬಿ.ಸಿ. ನಾಡಗೌಡ್ರ, ಉಪಾಧ್ಯಕ್ಷ ಕೆಂಚಪ್ಪ ನಾಡಗೌಡ್ರ, ಖಜಾಂಚಿ ಎ. ಮಂಜುನಾಥ, ಲಿಂಗರಾಜ ಯುವ ಘಟಕ ಅಧ್ಯಕ್ಷ ಪ್ರಭು ಬೋಳಗೊಂಡನವರ, ಬಸವರಾಜ ಸಂಗನಾಳ, ಈಶ್ವರಗೌಡ ಹಿರೇಗೌಡ್ರ ಇದ್ದರು.