2 ತಿಂಗಳಲ್ಲಿ ಗ್ರಂಥಾಲಯ ಉದ್ಘಾಟನೆ

devnalli
Published on

ದೇವನಹಳ್ಳಿ: ಇಲ್ಲಿನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಉಳಿಕೆ 38 ಲಕ್ಷ ರೂ ಅನುದಾನ ವಿಳಂಭವಾಗಿದೆ, ಕೆಲವೇ ದಿನದಲ್ಲಿ ಹಣ ಬಿಡುಗಡೆಯಾಗಲಿದ್ದು ಇನ್ನೆರಡು ತಿಂಗಳಲ್ಲಿ ಗ್ರಂಥಾಲಯ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವಸ್ವಾಮಿ ಹೇಳಿದರು.

ಬೂದಿಗೆರೆ ರಸ್ತೆಯ ಚಂದ್ರಶೇಖರ್ ಬಡಾವಣೆಯಲ್ಲಿ ಸೋಮವಾರ 1.88 ಕೋಟಿ ರೂ.ವೆಚ್ಚದ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ದೇವನಹಳ್ಳಿ ದೊಡ್ಡ ನಗರವಾಗಿ ಬೆಳೆಯುತ್ತಿದೆ, ಅದಕ್ಕೆ ತಕ್ಕಂತೆ ಇಲ್ಲಿ ದೊಡ್ಡ ಗ್ರಂಥಾಲಯದ ಕಟ್ಟಡದ ಅವಶ್ಯಕತೆ ಇದೆ. ಹಾಗಾಗಿ ಈ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು. ರಾಜ್ಯದ ಎಲ್ಲ ಹೊಸ ಗ್ರಂಥಾಲಯಗಳಿಗೆ ಹೊಸ ಪೀಠೋಪಕರಣಗಳನ್ನು ರಾಜ್ಯದ ಅರಣ್ಯ ಕೈಗಾರಿಕ ಅಬಿವೃದ್ಧಿ ನಿಗಮದಿಂದಲೇ ಖರೀದಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಅದರಂತೆ ಇದೆಲ್ಲ ಆಗಲಿದೆ ಎಂದರು. ಈ ಪಟ್ಟಣದಲ್ಲಿನ ಹಳೆಯ ಪುರಸಭ ಕಟ್ಟಡದಲ್ಲಿರುವ ವಾಚನಾಲಯವನ್ನು ಆ ಭಾಗದ ಹಿರಿಯ ನಾಗರೀಕರಿಗಾಗಿ ಉಳಿಸಿಕೊಳ್ಳಲು ಸಾರ್ವಜನಿಕರು ಕೋರಿದ್ದಾರೆ, ಇದಕ್ಕೆ ನಮಗೆ ಸ್ಥಳಿಯ ಪುರಸಭೆ ಸಹಕರಿಸಿ ಒಂದಿಷ್ಟು ಸೌಲಭ್ಯ ವೇತನ ಸಹಿತ ಸಿಬ್ಬಂದಿ ಒದಗಿಸಿದರೆ ಅಲ್ಲಿಯೂ ಗ್ರಂಥಾಲಯ ಮುಂದುವರಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net