

ಶೃಂಗೇರಿ: ಜೆಸಿಬಿಎಂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಐಪಿಎಸ್ ಅಧಿಕಾರಿಯಾಗಿದ್ದ ‘ಕೆ.ವಿ.ಆರ್.ಟ್ಯಾಗೂರ್ ಸ್ಮರಕ ಭವನ’ ಸೆ.4ರಂದು ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ಕಟ್ಟಡವನ್ನು ದಾನಿಗಳಾದ ಭಾಗ್ಯಾ ಟ್ಯಾಗೂರ್ ಹಾಗೂ ಡಾ.ಎಚ್.ಟಿ.ನಿರ್ಮಲಾ ಉದ್ಘಾಟಿಸುವರು.
ಸಂಘದ ಅಧ್ಯಕ್ಷ ಅಜಿತ್ ಅಣ್ಕುಳ್ಳಿ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು , ಮಣಿಪಾಲ ಅಕಾಡೆಮಿ ಆ್ ಜನರಲ್ ಎಜುಕೇಷನ್ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತೀ ವಿದ್ಯಾಸಂಸ್ಥೆಯ ಕಚ್ಚೋಡಿ ಶ್ರೀನಿವಾಸ್,ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸ್ವಾಮಿ ಭಾಗವಹಿಸಲಿದ್ದಾರೆ ಎಂದು ಅಜಿತ್ ಅಣ್ಕುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಳೇ ವಿದ್ಯಾರ್ಥಿ ಸಂಘ 1991ರಲ್ಲಿ ಸ್ಥಾಪನೆಗೊಂಡಿದ್ದು,ದಿವಂಗತ ಕೆ.ವಿ.ಆರ್.ಟ್ಯಾಗೋರ್ ಅವರು ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವೆಚ್ಚ ಭರಿಸಲು ಪ್ರಾರಂಭಿಸಲಾಯತು. ಪ್ರಸ್ತುತ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಿತ್ ಅಣ್ಕುಳ್ಳಿ, ಕಾರ್ಯದರ್ಶಿ ಎಚ್.ಟಿ ರಮೇಶ್ ಹಾಗೂ ಹಿಂದಿನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಸಹಕಾರದಿಂದ 75 ಲಕ್ಷ ರೂ.ವೆಚ್ಚದಲ್ಲಿ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ.
ಮಕ್ಕಳ ಸೃಜನಶೀಲತೆಗೆ ಪೂರಕ ವಾತಾವರಣ ಕಲ್ಪಿಸಲು ನೂತನ ಕಟ್ಟಡ ಬಳಸಬಹುದಾಗಿದೆ. ರಾಜ್ಯದಲ್ಲಿಯೇ ಈ ಹಳೇ ವಿದ್ಯಾರ್ಥಿ ಸಂಘ ಇದುವರೆಗೂ ಸುಮಾರು 400 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಥಿಕ ಸಹಕಾರ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 2015ರಿಂದ ಡಾ.ಎಚ್.ಟಿ.ನಿರ್ಮಲ ನಿಧಿ ಹಾಗೂ ದಿವಂಗತ ರತ್ನಾಕರ ಶುಂಠಿಕಟ್ಟೆ ನಿಧಿಯಿಂದ ವೃತ್ತಿ ಶಿಕ್ಷಣಕ್ಕೆ ಹೋಗುವ ಆಯ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.