ಕೂತ್ಕುಂಜದ ಐದು ಕಾಲುಸಂಕ ಲೋಕಾರ್ಪಣೆ : ಶಾಸಕಿ ಭಾಗೀರಥಿ ಮುರುಳ್ಯ

footbridge
ಕೂತ್ಕುಂಜ ಗ್ರಾಮದ ಪುತ್ಯ-ಸಂಪದ ಬೈಲುನಿಂದ ದೇವಳಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಲಾದ ಕಾಲು ಸಂಕವನ್ನುಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
Published on

ಸುಬ್ರಹ್ಮಣ್ಯ: ಪಂಜ ಗ್ರಾ.ಪಂ.ವ್ಯಾಪ್ತಿಯ ಕೂತ್ಕುಂಜ ಗ್ರಾಮದ ಪುತ್ಯ-ಸಂಪದ ಬೈಲುನಿಂದ ದೇವಳಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ನಿರ್ಮಾಣವಾದ ಐದು ಕಾಲುಸಂಕಗಳನ್ನು ಶಾಸಕಿ ಭಾಗೀರಥಿ ಮುರುಳ್ಯ ಶನಿವಾರ ಉದ್ಘಾಟಿಸಿದರು.

ಪಂಜ ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಪಂಜ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಲಿಗೋಧರ ಆಚಾರ್ಯ, ಮಾಜಿ ತಾ.ಪಂ.ಸದಸ್ಯೆ ಸುವರ್ಣಿನಿ ಎನ್.ಎಸ್, ಪ್ರಮುಖರಾದ ಶಿವರಾಮಯ್ಯ ಕರ್ಮಜೆ, ತಿಮ್ಮಪ್ಪ ಗೌಡ ಪುತ್ಯ, ಗ್ರಾ.ಪಂ.ಸದಸ್ಯರಾದ ಪ್ರಮೀಳಾ ಸಂಪ, ಜಗದೀಶ್ ಪುರಿಯ, ಶರತ್ ಕುದ್ವ, ಚಂದ್ರಶೇಖರ ದೇರಾಜೆ, ವೀಣಾ, ನೇತ್ರಾವತಿ ಕಲ್ಲಾಜೆ, ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ಚಂದ್ರಾವತಿ ಸಂಪ ಉಪಸ್ಥಿತರಿದ್ದರು.

ಮಾಜಿ ಸಚಿವ ಎಸ್.ಅಂಗಾರ ಒದಗಿಸಿದ ರೂ.35 ಲಕ್ಷ ರೂ. ಅನುದಾನದಲ್ಲಿ 5 ಕಾಲು ಸಂಕ ನಿರ್ಮಾಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net