ದೇವ-ದೇಶ-ದೇಹ ಮಂದಿರಗಳ ಸ್ವಚ್ಛತೆ ಅಗತ್ಯ...

KrishnaGeeta-1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಅನಿಸಿಕೆ

ಕೃಷ್ಣಗೀತಾ ಸೇವಾ ವೃಂದಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವಚ್ಛತೆ ಎನ್ನುವುದು ಸಾರ್ವಕಾಲಿಕ ಅವಶ್ಯಕತೆ. ಹೀಗಾಗಿ ದೇವ-ದೇಶ-ದೇಹ ಮಂದಿರಗಳಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಿದೆ. ಆ ಉದ್ದೇಶದಿಂದಲೇ ಕೃಷ್ಣಗೀತಾ ಸೇವಾ ವೃಂದ ಆರಂಭಿಸಲಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರ ಈ ವೃಂದದ ಮೂಲಕ ಸ್ವಚ್ಛತಾ ಅಭಿಯಾನ ಮುಂದುವರಿಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

KrishnaGeeta-2
ಉಡುಪಿಯ ಗೀತಾಮಂದಿರದಲ್ಲಿ ಕೃಷ್ಣಗೀತಾ ಸೇವಾ ವೃಂದಕ್ಕೆ ಸುಗುಣೇಂದ್ರ ಶ್ರೀ ಚಾಲನೆ ನೀಡಿದರು. ನಾಗರಾಜ್​ ಆಚಾರ್ಯ, ಪ್ರಭಾಕರ ಪೂಜಾರಿ, ಡಾ. ವ್ಯಾಸರಾಜ ತಂತ್ರಿ, ಕೆ.ರಾಘವೇಂದ್ರ ಭಟ್​, ರತೀಶ್​ ತಂತ್ರಿ ಇತರರಿದ್ದರು.

ಉಡುಪಿಯ ಗೀತಾ ಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ್​ ಅಭಿಯಾನಕ್ಕೆ ಪೂರಕವಾಗಿ ಭಾನುವಾರ ಆರಂಭಿಸಿದ ಕೃಷ್ಣಗೀತಾ ಸೇವಾ ವೃಂದಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಗಾಂಧಿ ಆಸ್ಪತ್ರೆಯ ಡಾ. ವ್ಯಾಸರಾಜ ತಂತ್ರಿ ಮತ್ತು ಆಸ್ಪತ್ರೆಯ ಸ್ವಚ್ಛತಾ ಬಳಗ, ಪತಂಜಲಿ ಯೋಗ ಸಮಿತಿಯ ಕೆ.ರಾಘವೇಂದ್ರ ಭಟ್​ ಮತ್ತು ಸಮಿತಿಯ ಪದಾಧಿಕಾರಿಗಳು, ಮಠದ ದಿವಾನ ನಾಗರಾಜ್​ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಅಂತರ್ಯಾಮಿಯ ಅನಂತಕೃಷ್ಣ ಪ್ರಸಾದ್​, ಮಠದ ಮೆನೇಜರ್​ ವಿಷ್ಣುಮೂರ್ತಿ ಉಪಾಧ್ಯಾಯ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

KrishnaGeeta-3

ಆರಂಭದಲ್ಲಿ ಗೀತಾ ಮಂದಿರದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗೀತಾ ಮಂದಿರದ ಒಳಗೆ ಕಿಟಕಿ ಸ್ವಚ್ಛಗೊಳಿಸುವ ಮೂಲಕ ಶ್ರೀಗಳು ಚಾಲನೆ ನೀಡಿದರು. ಅಭಿಯಾನದ ಸಂಚಾಲಕ ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಯಾವ ಊರಲ್ಲಾದರೂ ಅಭಿಯಾನ

KrishnaGeeta-4
ಪ್ರತಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ 6ರಿಂದ 7ರ ವರೆಗೆ ಗೀತಾ ಮಂದಿರದಿಂದ ಈ ಅಭಿಯಾನ ಮುಂದುವರಿಯಲಿದೆ. ಸಮಾಜದ ಎಲ್ಲೆಡೆ ಸ್ವಚ್ಛತೆ ಇರಬೇಕು. ಸ್ವಚ್ಛತೆಯಿದ್ದಲ್ಲಿ ಆರೋಗ್ಯ ಇರುತ್ತದೆ. ಆಸಕ್ತರು ಯಾವ ಊರಲ್ಲಿ ಬೇಕಾದರೂ ಗೀತಾ ಮಂದಿರ ಕೇಂದ್ರಿತ ಸೇವಾ ವೃಂದ ರಚಿಸಿಕೊಂಡು ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರಬಹುದಾಗಿದೆ. ಮಾಹಿತಿಗಾಗಿ ಅಭಿಯಾನದ ಸಂಚಾಲಕ ರಮಣ ಆಚಾರ್ಯ (ಮೊ.ಸಂ. 8792158946) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಸುಗುಣೇಂದ್ರ ಶ್ರೀಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net