

ಶಿಗ್ಲಿ: ಪಾದಯಾತ್ರೆಯಿಂದ ಪ್ರೇರಣೆಗೊಂಡು ಗ್ರಾಮದಲ್ಲಿ ನಿರ್ವಣವಾಗಿರುವ ಶ್ರೀ ಗುರು ಕೊಟ್ಟೂರು ಬಸವೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಏ. 28ರಿಂದ ಮೇ 5ರವರೆಗೆ ನಡೆಯಲಿದೆ ಎಂದು ವಿರಕ್ತಮಠದ ಚನ್ನವೀರಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಶ್ರೀ ಗುರು ಕೊಟ್ಟೂರು ಬಸವೇಶ್ವರ ಸ್ವಾಮಿಯ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಏ. 28ರಿಂದ ಪ್ರತಿ ದಿನ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಹಾಗೂ ಸಂಜೆ 6 ಗಂಟೆಗೆ ಗುರು ಕೊಟ್ಟೂರು ಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ ಎಂದರು.
ಸಭೆಯ ನೇತೃತ್ವ ವಹಿಸಿದ್ದ ಶ್ರೀ ಗುರು ಕೊಟ್ಟೂರು ಬಸವೇಶ್ವರ ವಿವಿಧೋದ್ದೇಶಗಳ ಸೇವಾ ಸಮಿತಿ (ರಿ) ಶಿಗ್ಲಿ ಹಾಗೂ ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿ ಪರವಾಗಿ ಮಾತನಾಡಿದ ಮಹಾದೇವಪ್ಪ ಬೆಳವಿಗಿ, ಲೋಕಾರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಾಗೂ ಸದ್ಭಕ್ತರು ಚ್ಚುಕಟ್ಟಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡಿದರು.
ಡಿ.ವೈ. ಹುನಗುಂದ, ಎಸ್.ಪಿ. ಬಳಿಗಾರ, ರಾಜರತ್ನ ಹುಲಗೂರ, ರಾಮಣ್ಣ ಲಮಾಣಿ, ಅಶೋಕ ಶಿರಹಟ್ಟಿ, ರಾಜು ಓಲೇಕಾರ, ಇತರರಿದ್ದರು.