ಸರ್ಕಾರಿ ಶಾಲೆಯಲ್ಲಿ ಅಡುಗೆ ಕೊಠಡಿ, ಶೌಚಗೃಹ ಉದ್ಘಾಟನೆ

HUN-JULY-5-4(GIRLS HPS PROGRAMME)
ಹುಣಸೂರು ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿ-ಗಾರ್ಡ್ ಸಂಸ್ಥೆ ನಿರ್ಮಿಸಿಕೊಟ್ಟ ಅಡುಗೆ ಮನೆ ಮತ್ತು ಶೌಚಗೃಹವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಉದ್ಘಾಟಿಸಿದರು. ಸಂತೋಷ್‌ಕುಮಾರ್, ಸಿ.ಎಸ್.ಮಹೇಶ್, ಸೂರ್ಯಪ್ರಸಾದ್, ಹಷೇಂದ್ರ ಪ್ರಸಾದ್ ಇತರರಿದ್ದರು.
Published on

ಹುಣಸೂರು: ವಿ-ಗಾರ್ಡ್ ಕಂಪನಿಯ ವತಿಯಿಂದ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 7 ಲಕ್ಷ ರೂ. ವೆಚ್ಚದಡಿ ನಿರ್ಮಿಸಿಕೊಟ್ಟಿರುವ ಅಡುಗೆ ಕೊಠಡಿ ಮತ್ತು ಶೌಚಗೃಹಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಶುಕ್ರವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅವುಗಳನ್ನು ಒದಗಿಸುವಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ತೋರುತ್ತಿರುವ ಕಾಳಜಿ ಪ್ರಶಂಸನೀಯ. ತಾಲೂಕಿನ ವಿವಿಧ ಉದ್ದಿಮೆಗಳು ಸುಮಾರು 3 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ತರಗತಿ ಕೊಠಡಿ, ಕಾಂಪೌಂಡ್, ಕುಡಿಯುವ ನೀರು, ಶೌಚಗೃಹಗಳನ್ನು ನಿರ್ಮಿಸಿಕೊಟ್ಟಿವೆ ಎಂದರು.

ವಿ-ಗಾರ್ಡ್ ಸಂಸ್ಥೆಯ ಉಪಾಧ್ಯಕ್ಷ ಸೂರ್ಯಪ್ರಸಾದ್ ಮಾತನಾಡಿ. ಸಂಸ್ಥೆಯು ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಿ.ಎಸ್.ಆರ್ ಅನುದಾನವನ್ನು ಬಳಸಿ ಸಾರ್ವಜನಿಕರಿಗೆ ಉಪಯುಕ್ತವಾದ ಕೆಲಸ ಮಾಡಿಕೊಂಡು ಬರುತ್ತಿದೆ. ಕೋವಿಡ್ ಸಮಯದಲ್ಲಿ ಸಹ ಕಂಪೆನಿಯ ಕೋವಿಡ್ ಬಾಧಿತರಿಗೆ ಔಷಧೋಪಚಾರ ಮಾಡಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ. ಸಂತೋಷ್‌ಕುಮಾರ್ ಮಾತನಾಡಿದರು. ವಿಗಾರ್ಡ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಹರ್ಷೇಂದ್ರ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ, ಸದಸ್ಯರು, ಬಿ.ಐ.ಇ.ಆರ್.ಟಿ ಸೋಮಶೇಖರ, ಎ.ಎನ್.ತ್ರಿನೇಶ, ಎಚ್.ಪಿ.ವೀರಭದ್ರಪ್ಪ, ನಂದೀಶ, ಮಹದೇವಸ್ವಾಮಿ, ಮುಖ್ಯಶಿಕ್ಷಕ ಸಿ.ಎಸ್.ಮಹೇಶ್, ಶಿಕ್ಷಕರಾದ ಮಮತಾ, ಯಶೋದಾ, ಸಾಹೇರಾಬಾನು, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net